SPORTS | ಕೆನಡಾ ಓಪನ್ ಗೆದ್ದು ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಕ್ಯಾಲ್ಗರಿಯಲ್ಲಿ ನಡೆದ ಕೆನಡಾ ಓಪನ್‌ನಲ್ಲಿ ಫೈನಲ್ ಪಂದ್ಯ ಗೆದ್ದ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಈ ವರ್ಷದ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಚೀನಾದ ಲಿ ಶಿಫೆಂಗ್‌ರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಲಕ್ಷ್ಯ ಫೈನಲ್ ಪಂದ್ಯ ಗೆದ್ದು ಬೀಗಿದ್ದಾರೆ. ಎರಡನೇ ಸೆಟ್‌ನಲ್ಲಿ ಲಕ್ಷ್ಯ ಹಿನ್ನೆಡೆ ಅನುಭವಿಸಿದ್ದರು, ತದನಂತರ ಏಕಾಏಕಿ ಕಂಬ್ಯಾಕ್ ಮಾಡಿದ್ದು, ವರ್ಷದ ಮೊದಲ ಪ್ರಶಸ್ತಿ ಪಡೆದಿದ್ದಾರೆ. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದ ಲಕ್ಷ್ಯ ಎರಡನೇ ಸೆಟ್‌ನಲ್ಲಿ ಡಲ್ ಆಗಿದ್ದರು, ತದನಂತರ ಲಕ್ಷ್ಯ ಉತ್ತಮ ಪ್ರದರ್ಶನ ನೀಡಿದ್ದು, ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!