Tuesday, June 6, 2023

Latest Posts

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟಿ.ಎಸ್.‌ ತಿರುಮೂರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿರುವ ಟಿ.ಎಸ್.‌ ತಿರುಮೂರ್ತಿ ಅವರು ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿ 2022ರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳವಾರ ಟಿ.ಎಸ್.‌ ತಿರುಮೂರ್ತಿಯವರು ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಅಧ್ಯಕ್ಷರಾಗಿ ನೇಮಕಗೊಂಡಿರುವ ತಿರುಮೂರ್ತಿಯವರ ಅವಧಿ ಡಿಸೆಂಬರ್‌ 2022ರವರೆಗೆ ಇರಲಿದೆ.
2001ರಲ್ಲಿ ಅಮೆರಿಕದಲ್ಲಿ ನಡೆದ ಭೀಕರ ಭಯೋತ್ಪಾದನ ದಾಳಿಗೆ ಪ್ರತಿಯಾಗಿ ವಿಶ್ವಸಂಸ್ಥೆಯ ಭಯೋತ್ಪಾದನ ನಿಗ್ರಹ ಸಮಿತಿ ರಚನೆಗೊಂಡಿತು. ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಂಗಸಂಸ್ಥೆಯೇ ಆಗಿದೆ. ಇದೀಗ ಇದರ ಅಧ್ಯಕ್ಷರಾಗಿ ಟಿ.ಎಸ್.‌ ತಿರುಮೂರ್ತಿ ನೇಮಕಗೊಂಡಿದ್ದಾರೆ.
ಟಿ.ಎಸ್.‌ ತಿರುಮೂರ್ತಿ ಅವರು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿದ್ದಾರೆ. ಈ ಮುಂಚೆ 2020ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ಯಾಲೇಸ್ಟಿನಿಯನ್‌ ಪ್ರಧಿಕಾರದ ಭಾರತದ ಪ್ರತಿನಿಧಿಯಾಗಿ, ಇಂಡೋನೇಷ್ಯಾದ ಜಕಾರ್ತಾದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಉಪಮುಖ್ಯಸ್ಥ, ಯುಎನ್ ನ ಭಾರತದ ರಾಯಭಾರಿ ಕೌನ್ಸಿಲ್‌ ಆಗಿ, ಗಲ್ಫ್‌, ಅರಬ್‌, ಆಫ್ರಿಕಾ ದೇಶಗಳ ಅಭಿವೃದ್ಧಿ ಪಾಲುದಾರಿಕೆಯ ಆರ್ಥಿಕ ಖಾತೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!