ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕ್ರಿಕೆಟ್ ತಂಡದ ಬ್ಯಾಟರ್ ಅಭಿನವ್ ಮನೋಹರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ರಣಜಿ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದ 28 ಆಟಗಾರರ ಸಂಭಾವ್ಯ ಪಟ್ಟಿಯಲ್ಲಿ ಮನೋಹರ್ ಹೆಸರು ಕೂಡ ಇದೆ.
ಐಎಎಫ್ ಕ್ರೀಡಾಂಗಣದಲ್ಲಿ ಟೂರ್ನಿಗಾಗಿ ಮನೋಹರ್ ಅಭ್ಯಾಸದಲ್ಲಿಯೂ ಪಾಲ್ಗೊಂಡಿದ್ದರು. ಇವರಿಗೆ ಸೋಂಕು ದೃಢಪಟ್ಟ ನಂತರ ಅಭ್ಯಾಸವನ್ನು ಮೊಟಕುಗೊಳಿಸಲಾಗಿದೆ. ಜೊತೆಗಿದ್ದ ಇತರೆ ಆಟಗಾರರಿಗೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.