ಭಾರತದ ದೃಷ್ಟಿಕೋನ ವಿಶ್ವದ ಭವಿಷ್ಯದ ಮಾರ್ಗಸೂಚಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಗದರ್ಶನಕ್ಕಾಗಿ ಜಗತ್ತು ಈಗ ಭಾರತದತ್ತ ನೋಡುತ್ತಿದೆ. ನಮ್ಮ ಮಾತುಗಳು ಮತ್ತು ದೃಷ್ಟಿಯನ್ನು ಜಗತ್ತು ಭವಿಷ್ಯದ ಮಾರ್ಗಸೂಚಿಯಾಗಿ ನೋಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮುಂದಿನ ವಾರ ಇಲ್ಲಿ ನಡೆಯಲಿರುವ ಪ್ರತಿಷ್ಠಿತ ಜಿ 20 ಶೃಂಗಸಭೆಗೆ ಮುಂಚಿತವಾಗಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಜಿಡಿಪಿ ಕೇಂದ್ರಿತ ದೃಷ್ಟಿಕೋನವು ಈಗ ಮಾನವ ಕೇಂದ್ರಿತವಾಗಿ ಬದಲಾಗುತ್ತಿದೆ ಮತ್ತು ಇದರಲ್ಲಿ ಭಾರತವು ವೇಗವರ್ಧಕದ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ಭಾರತದ ಬಗೆಗಿನ ಪ್ರಪಂಚದ ಗ್ರಹಿಕೆ ಹೇಗೆ ಬದಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಮೋದಿ, ದೀರ್ಘಕಾಲದಿಂದ ಭಾರತವನ್ನು ಒಂದು ಶತಕೋಟಿ ಹಸಿದ ಹೊಟ್ಟೆಗಳ ದೇಶವನ್ನಾಗಿ ನೋಡಲಾಗುತ್ತಿತ್ತು. ಈಗ ಅದು ಒಂದು ಶತಕೋಟಿ ಮಹತ್ವಾಕಾಂಕ್ಷೆಯ ಮನಸ್ಸುಗಳು ಮತ್ತು ಎರಡು ಶತಕೋಟಿ ಕೌಶಲ್ಯಪೂರ್ಣ ಕೈಗಳ ದೇಶವಾಗಿದೆ ಎಂದು ಮಾತನಾಡಿದ್ದಾರೆ.

2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಮತ್ತು ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ನಮ್ಮ ರಾಷ್ಟ್ರೀಯ ಜೀವನದ ದೃಷ್ಟಿಕೋನದಲ್ಲಿ ಸ್ಥಾನವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಜಿ 20 ಅಧ್ಯಕ್ಷತೆ ವಹಿಸಿಕೊಂಡಿರುವುದರಿಂದ ಅನೇಕ ಸಕಾರಾತ್ಮಕ ಪರಿಣಾಮಗಳಿವೆ, ಅದರಲ್ಲಿ ಕೆಲವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿವೆ ಎಂದು ಪ್ರಧಾನಿ ಹೇಳಿದರು.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ವಿಶ್ವದ ಕಲ್ಯಾಣಕ್ಕೆ ಮಾರ್ಗದರ್ಶಿ ತತ್ವವಾಗಬಹುದು ಎಂದು ಅವರು ತಿಳಿಸಿದರು. ಭಾರತದ ಜಿ 20 ಅಧ್ಯಕ್ಷತೆಯ ಥೀಮ್ ಆಗಿರುವ ‘ವಸುಧೈವ ಕುಟುಂಬಕಂ’ ಕೇವಲ ಘೋಷಣೆಯಲ್ಲ, ಅದು ನಮ್ಮ ಸಾಂಸ್ಕೃತಿಕ ಸಂಪ್ರದಾಯದಿಂದ ಪಡೆದ ಸಮಗ್ರ ತತ್ವಶಾಸ್ತ್ರವಾಗಿದೆ ಎಂದು ಅವರು ಹೇಳಿದರು.

1.5 ಕೋಟಿಗೂ ಹೆಚ್ಚು ಭಾರತೀಯರು ವರ್ಷವಿಡೀ ಜಿ 20 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಿ 20 ಯಲ್ಲಿ ಆಫ್ರಿಕಾ ನಮಗೆ ಹೆಚ್ಚಿನ ಆದ್ಯತೆಯಾಗಿದೆ. ಎಲ್ಲಾ ದೇಶಗಳ ಅಭಿಪ್ರಾಯಗಳನ್ನು ಕೇಳದೆ ವಿಶ್ವದಲ್ಲಿ ಭವಿಷ್ಯದ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದರು.

ಕಾಶ್ಮೀರ, ಅರುಣಾಚಲ ಪ್ರದೇಶದಲ್ಲಿ ನಡೆದ ಜಿ 20 ಶೃಂಗಸಭೆಗಳ ಬಗ್ಗೆ ಪಾಕಿಸ್ತಾನ ಮತ್ತು ಚೀನಾದ ಆಕ್ಷೇಪಣೆಗಳನ್ನು ಪ್ರಧಾನಿ ಮೋದಿ ತಳ್ಳಿಹಾಕಿದರು. ದೇಶದ ಪ್ರತಿಯೊಂದು ಭಾಗದಲ್ಲೂ ಸಭೆಗಳನ್ನು ನಡೆಸುವುದು ಸಹಜ ಪ್ರಕ್ರಿಯೆ ಎಂದು ಅವರು ಹೇಳಿದರು.

ಕೇಂದ್ರವು ಸೆಪ್ಟೆಂಬರ್ 18-22 ರ ಅವಧಿಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಭಾರತದ ಜಿ 20 ಅಧ್ಯಕ್ಷ ಸ್ಥಾನವು ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!