July 23, 2026
Thursday, July 23, 2026
spot_img

ಟಿ20ಯಲ್ಲಿ ಭಾರತದ ಯುವ ಬ್ಯಾಟರ್ ಕಮಾಲ್: ಜಗತ್ತಿನ ದಿಗ್ಗಜರನ್ನೇ ಹಿಂದಿಕ್ಕಿದ ಅಭಿಷೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಯುವ ಹಾಗೂ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೊಸ ಇತಿಹಾಸ ಬರೆದ ಯುವ ಬ್ಯಾಟರ್

ಈ ಸ್ಫೋಟಕ ಇನ್ನಿಂಗ್ಸ್‌ನೊಂದಿಗೆ ಅಭಿಷೇಕ್ ಶರ್ಮಾ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ (20 ಕ್ಕಿಂತ ಕಡಿಮೆ ಎಸೆತಗಳು) ಅತಿ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೆ ಆಡಿರುವ 46 ಟಿ20 ಇನಿಂಗ್ಸ್‌ಗಳಲ್ಲಿ ಅಭಿಷೇಕ್ ಬರೋಬ್ಬರಿ 5 ಬಾರಿ ಈ ಸಾಧನೆ ಮಾಡಿದ್ದಾರೆ.

ಯುವರಾಜ್, ವಾರ್ನರ್ ರೆಕಾರ್ಡ್ ಬ್ರೇಕ್!

ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ಭಾರತದ ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮತ್ತು ನ್ಯೂಜಿಲೆಂಡ್‌ನ ಕಾಲಿನ್ ಮನ್ರೋ ಅವರ ಹೆಸರಿನಲ್ಲಿ ಜಂಟಿಯಾಗಿತ್ತು. ಇವರೆಲ್ಲರೂ ಐಸಿಸಿ (ICC) ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ವಿರುದ್ಧ ತಲಾ 3 ಬಾರಿ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದರು. ಆದರೆ 25 ವರ್ಷದ ಅಭಿಷೇಕ್, ಈ ಎಲ್ಲಾ ದಿಗ್ಗಜರ ದಾಖಲೆಗಳನ್ನು ಸೈಡ್‌ಲೈನ್ ಮಾಡಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ರನ್ ಗಳಿಸುವ ಭಾರತದ ಭರವಸೆಯ ಆಟಗಾರನಾಗಿ ಅಭಿಷೇಕ್ ಶರ್ಮಾ ಹೊರಹೊಮ್ಮುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !