ರನ್‌ ವೇಯಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನ ಡಿಕ್ಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತ್ತಾದ ರನ್‌ ವೇಯಲ್ಲಿ ಟ್ಯಾಕ್ಸಿಯಿಂಗ್ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ಇಂದು ಬೆಳಿಗ್ಗೆ ತೀರಾ ಸಮೀಪಕ್ಕೆ ಬಂದು ರೆಕ್ಕಿಗೆ ಟಚ್ ಆಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ನೂರಾರು ಪ್ರಯಾಣಿಕರು ಪಾರಾಗಿದ್ದಾರೆ.

ಡಿಕ್ಕಿಯಿಂದಾಗಿ ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದ ರೆಕ್ಕೆಯ ತುದಿ ಮುರಿದು ರನ್‌ವೇ ಮೇಲೆ ಬಿದ್ದಿದ್ದು, ದರ್ಭಾಂಗಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ರೆಕ್ಕೆಗೆ ಹಾನಿಯಾಗಿದೆ.

ಡಿಜಿಸಿಎ ವಿಸ್ತೃತ ತನಿಖೆಗೆ ಆದೇಶ
ಕೊಲ್ಕತ್ತಾದಲ್ಲಿ ನಡೆದ ಘಟನೆ ಬಗ್ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(DGCA) ತನಿಖೆಗೆ ಆದೇಶಿಸಿದೆ. ನಾವು ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದೇವೆ. ಇಂಡಿಗೋ ಏರ್‌ಲೈನ್ಸ್‌ನ ಇಬ್ಬರೂ ಪೈಲಟ್‌ಗಳನ್ನು ಆಫ್-ರೋಸ್ಟರ್ ಮಾಡಲಾಗಿದೆ. ತನಿಖೆಯ ಸಮಯದಲ್ಲಿ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಗುವುದು. ಎರಡೂ ವಿಮಾನಗಳನ್ನು ವಿವರವಾದ ತಪಾಸಣೆಗೊಳಪಡಿಸಲಾಗುವುದು ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!