ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕದ ಹೇಳಿಕೆ ಅನಗತ್ಯ: ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (Ministry of External Affairs) ಕಚೇರಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಕಾರ್ಯನಿರ್ವಾಹಕ ಉಪ ಮುಖ್ಯಸ್ಥರಾದ ಗ್ಲೋರಿಯಾ ಬರ್ಬೆನಾ ಜತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಬುಧವಾರ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತಂತೆ ಪ್ರತಿಕ್ರಿಯಿಸಿದ ಅಮೆರಿಕ, ಕಾನೂನು ಪ್ರಕ್ರಿಯೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿತ್ತು.

ಭಾರತದಲ್ಲಿನ ಕೆಲವು ಕಾನೂನು ಪ್ರಕ್ರಿಯೆಗಳ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರ ಹೇಳಿಕೆಗಳಿಗೆ ನಾವು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತೇವೆ. ರಾಜತಾಂತ್ರಿಕತೆಯಲ್ಲಿ, ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಸಹವರ್ತಿ ಪ್ರಜಾಪ್ರಭುತ್ವಗಳ ಸಂದರ್ಭದಲ್ಲಿ ಈ ಜವಾಬ್ದಾರಿ ಇನ್ನೂ ಹೆಚ್ಚು. ಇದು ಇಲ್ಲದಿದ್ದರೆ ಯಾವುದೂ ಸರಿಹೊಂದಲ್ಲ. ಭಾರತದ ಕಾನೂನು ಪ್ರಕ್ರಿಯೆಗಳು ವಸ್ತುನಿಷ್ಠ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿರುವ ನ್ಯಾಯಾಂಗವನ್ನು ಆಧರಿಸಿವೆ. ಅದರ ಮೇಲೆ ಹೇಳಿಕೆ ನೀಡುವುದು ಅನಗತ್ಯ ಎಂದಿದೆ.

ಆರೋಪ ಎದುರಿಸುತ್ತಿರುವ ಯಾವುದೇ ಭಾರತೀಯ ಪ್ರಜೆಯಂತೆ ಕೇಜ್ರಿವಾಲ್ ಕೂಡ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಗೆ ಅರ್ಹರು ಎಂದು ಜರ್ಮನಿಯ ವಿದೇಶಾಂಗ ಕಚೇರಿ ಒತ್ತಿ ಹೇಳಿದ ದಿನಗಳ ನಂತರ ಅಮೆರಿಕ ಈ ರೀತಿ ಪ್ರತಿಕ್ರಿಯಿಸಿತ್ತು.

ಭಾರತ ಸರ್ಕಾರವು ಜರ್ಮನ್ ರಾಯಭಾರಿಯನ್ನು ಕರೆಸಿದ್ದು, ಇದು “ಆಂತರಿಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ” ಎಂದು ಹೇಳಿತು. ನಾವು ನಮ್ಮ ನ್ಯಾಯಾಂಗ ಪ್ರಕ್ರಿಯೆಯ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಮತ್ತು ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವುದನ್ನು ಖಂಡಿಸುತ್ತೇವೆ. ಇಂತಹ ಪಕ್ಷಪಾತದ ಊಹೆಗಳು ಅನಗತ್ಯವಾದವು” ಎಂದು ಭಾರತ ಜರ್ಮನಿ ಹೇಳಿಕೆಯನ್ನು ಖಂಡಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!