ಇಂಡಿಗೋ, ಸ್ಪೈಸ್​ಜೆಟ್​ ಬಳಿಕ ಏರ್​ ವಿಸ್ತಾರಾಗೂ ಬಿತ್ತು 10 ಲಕ್ಷ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲ ದಿನಗಳ ಹಿಂದೆ ಇಂಡಿಗೋ ಹಾಗೂ ಸ್ಪೈಸ್​ಜೆಟ್​ ಏರ್​ಲೈನ್ಸ್​ಗೆ ದಂಡ ವಿಧಿಸಿದ್ದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಇದೀಗ ಏರ್​ ವಿಸ್ತಾರಾಗೂ 10 ಲಕ್ಷ ರೂಪಾಯಿ ದಂಡ ಹಾಕಿದೆ.
ಮಧ್ಯಪ್ರದೇಶದ ಇಂದೋರ್​​ ವಿಮಾನ ನಿಲ್ದಾಣದಲ್ಲಿ ತರಬೇತಿ ಇಲ್ಲದ ಪೈಲಟ್​​ನಿಂದ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದಕ್ಕಾಗಿ ಈ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಜಿಸಿಎ ನೀಡಿರುವ ಟೇಕಾಫ್​ ಮತ್ತು ಲ್ಯಾಂಡಿಂಗ್​ ಕ್ಲಿಯರೆನ್ಸ್​ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್​ಲೈನ್ಸ್​ ಕಂಪನಿಗೆ ದಂಡ ಹಾಕಲಾಗಿದೆ. ಏರ್​​ಲೈನ್ಸ್​ ಕಂಪನಿ ತೆಗೆದುಕೊಂಡಿರುವ ನಿಯಮದಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಇದೊಂದು ಗಂಭೀರ ನಿಯಮ ಉಲ್ಲಂಘನೆ ಅಪರಾಧವಾಗಿದೆ ಎಂದಿದೆ.
ಸಿಮ್ಯುಲೇಟರ್​​ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್​​ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಸಿಮ್ಯುಲೇಟರ್​​ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 30ರಂದು ಈ ಘಟನೆ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!