ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೇಕಾಫ್ ಆಗುವಾಗ ರನ್‌ವೇ ಮೇಲೆಯೇ ಇಂಡಿಗೋ ವಿಮಾನ ಜಾರಿರುವ ಘಟನೆ ಅಸ್ಸಾಂನ ಜೋರ್ಹತ್‌ನಲ್ಲಿ ನಡೆದಿದೆ. ಘಟನಾ ಬಳಿಕ ಅಧಿಕಾರಿಗಳು 6E757 ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದರು. ಇಂಡಿಗೋ ಫ್ಲೈಟ್ ಗುರುವಾರ ಜೋರ್ಹತ್‌ನಿಂದ ಕೋಲ್ಕತ್ತಾಗೆ ಹಾರಬೇಕಿತ್ತು. ಆದರೆ, ಟೇಕಾಫ್ ಆಗುವ ಸಮಯದಲ್ಲಿ ಬದಿಯಲ್ಲಿದ್ದ ಹುಲ್ಲು ಹಾಸು, ಕೆಸರಿನ ಮೇಲೆ ಚಕ್ರಗಳು ಜಾರಿವೆ. ಘಟನೆಯ ವೇಳೆ ವಿಮಾನದಲ್ಲಿ 98 ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ವಿಮಾನಕ್ಕಾಗಲೀ, ಪ್ರಯಾಣಿಕರಿಗಾಗಲೀ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೇರೆ ದಾರಿಯಿಲ್ಲದೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅನುಮತಿ ಕೊಟ್ಟ ಬಳಿಕವೇ ಇಂಡಿಗೋ ವಿಮಾನ ಟೇಕ್ ಆಫ್ ಆಗಲಿದೆ. ಅಕಸ್ಮಾತ್ ಸರೊ ಹೋಗದೆ ಇದ್ದಲ್ಲಿ ಪ್ರಯಾಣಿಕರಿಗೆ ಹಣ ವಾಪಸ್ ನೀಡುತ್ತೇವೆ ಇಲ್ಲವೇ, ಬೇರೆ ವಿಮಾನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.