ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಡವರ ಹೊಟ್ಟೆ ತುಂಬಿಸು, ಕಡಿಮೆ ಬೆಲೆಯಲ್ಲಿ ಎಲ್ಲರ ಕೈಗೆಟುಕುವ ಇಂದಿರಾ ಕ್ಯಾಂಟೀನ್‌ಗೆ ಇನ್ಮುಂದೆ ಡಿಜಿಟಲ್ ಟಚ್ ನೀಡಲಾಗುತ್ತದೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಹೋಟೆಲ್, ರೆಸ್ಟೋರೆಂಟ್ಗಳ ರೀತಿ ಡಿಜಿಟಲ್ನಲ್ಲಿ ಆರ್ಡರ್ ಪಡೆಯೋ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿಪ್ಲಾನ್ ಮಾಡುತ್ತಿದೆ. ಆಹಾರದ ಗುಣಮಟ್ಟ, ಗ್ರಾಹಕರ ಬೇಡಿಕೆ, ಕುಂದು ಕೊರತೆಗಳನ್ನ ಡಿಜಿಟಲ್ ವ್ಯವಸ್ಥೆಯ ಮೂಲಕ ಕಲೆ ಹಾಕೋಕೆ ಚಿಂತನೆ ನಡೆಸಿದೆ.
ಬೆಂಗಳೂರಿನ 169 ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಸಜ್ಜಾಗಿರೋ ಪಾಲಿಕೆ, ಇದೀಗ ಆರ್.ಆರ್.ನಗರ ವ್ಯಾಪ್ತಿಯಲ್ಲಿ ಟ್ರಯಲ್ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಶೀಘ್ರದಲ್ಲೇ ಟೆಂಡರ್ ಕರೆಯೋಕೆ ಸಜ್ಜಾಗಿದೆ.
ಸದ್ಯ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟ, ಗುತ್ತಿಗೆದಾರರ ಸಮಸ್ಯೆಗಳು, ಶುಚಿತ್ವ, ಬೇಡಿಕೆ ಕುರಿತು ದೂರುಗಳು ಬಂದ ಬೆನ್ನಲ್ಲೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲು ಪಾಲಿಕೆ ಪ್ಲಾನ್ ಮಾಡಿದೆ.