June 17, 2026
Wednesday, June 17, 2026
spot_img

ಗೌರಿ ಲಂಕೇಶ್‌ ಹತ್ಯೆಯ ಆಘಾತದಿಂದ ಇಂದಿರಾ ಚೇತರಿಸಿಕೊಂಡಿರಲಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಹಿತಿ ಪಿ. ಲಂಕೇಶ್‌ ಅವರ ಪತ್ನಿ ಇಂದಿರಾ ಲಂಕೇಶ್‌ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇಂದಿರಾ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ಲಂಕೇಶ್‌ ಅವರ ಕುಟುಂಬ ಎಷ್ಟೆಲ್ಲಾ ಸಾಧನೆಗಳನ್ನು ಮಾಡಿದೆ. ಈ ಎಲ್ಲ ಸಾಧನೆಗಳಿಗೂ ಇಂದಿರಾ ಲಂಕೇಶ್‌ ಅವರು ಬೆನ್ನೆಲುಬಾಗಿ ನಿಂತಿದ್ದರು. ಮೊದಲಿನಿಂದಲೂ ಲಂಕೇಶ್‌ ಕುಟುಂಬದ ಜೊತೆ ಸ್ನೇಹವಿದೆ. ಅವರ ಮಕ್ಕಳು ನನಗೆ ಆತ್ಮೀಯರು. ಇಂದಿರಾ ಅವರ ಬಗ್ಗೆಯೂ ಅಪಾರ ಗೌರವವಿದೆ. ಕೆಲವು ವರ್ಷಗಳ ಹಿಂದೆ ಗೌರಿ ಲಂಕೇಶ್‌ ಅವರನ್ನು ಕೊಲ್ಲಲಾಗಿತ್ತು. ಗೌರಿ ಅವರ ಜೊತೆಗೇ ಇದ್ದ ಇಂದಿರಾ ಅವರು ಮಗಳನ್ನು ಕಳೆದುಕೊಂಡ ಆಘಾತದಿಂದ ಹೊರಬಂದಿರಲಿಲ್ಲ. ಅವರ ಕುಟುಂಬದ ನೋವಿನಲ್ಲಿ ನಾನಿದ್ದೇನೆ. ಇಂದಿರಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಕನ್ನಡದ ಪ್ರಸಿದ್ಧ ಸಾಹಿತಿ ಪಿ. ಲಂಕೇಶ್‌ ಅವರ ಪತ್ನಿ, ಲೇಖಕಿ ಇಂದಿರಾ ಲಂಕೇಶ್‌ ವಯೋಸಹಜ ಸಮಸ್ಯೆಗಳಿಂದ ಇಂದಿರಾ ಇಹಲೋಕ ತ್ಯಜಿಸಿದ್ದಾರೆ. ಪತಿಯ ಸಾಹಿತ್ಯದ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ಇಂದಿರಾ ಲಂಕೇಶ್‌ ಅವರು ಸ್ವತಃ ಪ್ರಮುಖ ಲೇಖಕಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಲಂಕೇಶ್‌ ಪತ್ರಿಕೆಯ ಹಿಂದೆಯೂ ಇಂದಿರಾ ಅವರ ಸಹಾಯವಿದೆ. ಪತ್ರಿಕೆಯ ಆಡಳಿತ, ಮುನ್ನಡೆ, ಪ್ರಕಾಶನದ ಜವಾಬ್ದಾರಿಯನ್ನು ನಿಭಾಯಿಸಿದ್ದು ಇಂದಿರಾ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !