July 21, 2026
Tuesday, July 21, 2026
spot_img

ತೆಲಂಗಾಣ ಸರ್ಕಾರದಿಂದ ಇಂದಿರಮ್ಮ ಹೌಸಿಂಗ್ ಸ್ಕೀಮ್ ಲಾಂಚ್: 5 ಲಕ್ಷ ಸಬ್ಸಿಡಿ, ಮಹಿಳೆಯರಿಗೆ ಶೇ.30 ಮೀಸಲಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹೈದರಾಬಾದ್ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವ ಬಡ ಮತ್ತು ಮಧ್ಯಮ ವರ್ಗದ ಜನರ ಕನಸನ್ನು ನನಸು ಮಾಡಲು ತೆಲಂಗಾಣ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.

ನಗರದ ಬಡವರಿಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಹುಮಹಡಿ ಫ್ಲಾಟ್‌ಗಳನ್ನು ನಿರ್ಮಿಸಿಕೊಡುವ ಮಹತ್ವಾಕಾಂಕ್ಷೆಯ ‘ಇಂದಿರಮ್ಮ ಇಂಡ್ಲು – ಅಫರ್ಡಬಲ್ ಹೌಸಿಂಗ್ ಸ್ಕೀಮ್’ ಯೋಜನೆಗೆ ವಸತಿ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅಧಿಕೃತ ಚಾಲನೆ ನೀಡಿದ್ದಾರೆ.

6 ಲಕ್ಷ ರೂಪಾಯಿಗೆ ಸಿಗಲಿದೆ ಫ್ಲಾಟ್:

ಯೋಜನೆಯಡಿ ನಿರ್ಮಾಣವಾಗಲಿರುವ ಪ್ರತಿ ಫ್ಲಾಟ್‌ನ ಒಟ್ಟು ಅಂದಾಜು ವೆಚ್ಚ 11 ಲಕ್ಷ ಆಗಿದೆ. ಇದರಲ್ಲಿ ತೆಲಂಗಾಣ ಸರ್ಕಾರವೇ 5 ಲಕ್ಷ ಸಬ್ಸಿಡಿ (ಸಹಾಯಧನ) ನೀಡಲಿದ್ದು, ಫಲಾನುಭವಿಗಳು ಕೇವಲ 6 ಲಕ್ಷ ಪಾವತಿಸಿದರೆ ಸಾಕು. ಹೈದರಾಬಾದ್‌ನ ಪ್ರಮುಖ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಭೂಮಿಯ ಯಾವುದೇ ಶುಲ್ಕ ಇರುವುದಿಲ್ಲ.

ಮೊದಲ ಹಂತದಲ್ಲಿ 7,680 ಫ್ಲಾಟ್‌ಗಳು:

ಹೈದರಾಬಾದ್ ಕೋರ್ ಅರ್ಬನ್ ರೀಜನ್ (CURE) ವ್ಯಾಪ್ತಿಯ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತವಾಗಿ 7,680 ಲೋ ಇನ್‌ಕಮ್ ಗ್ರೂಪ್ (LIG) ಫ್ಲಾಟ್‌ಗಳನ್ನು ನಿರ್ಮಿಸಲಾಗುವುದು. ಒಟ್ಟಾರೆಯಾಗಿ 1 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಪ್ರತಿ ಫ್ಲಾಟ್ 528 ಚದರ ಅಡಿ ಬಿಲ್ಟ್-ಅಪ್ ಏರಿಯಾ (400 ಚದರ ಅಡಿ ಕಾರ್ಪೆಟ್ ಏರಿಯಾ) ಹೊಂದಿರಲಿದೆ.

ಇದನ್ನೂ ಓದಿ:

ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಫಲಾನುಭವಿಗಳು ಆಗಸ್ಟ್ 10, 2026 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.  ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಬಾರದು. ಜತೆಗೆ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರಬಾರದು. ಕನಿಷ್ಠ 10 ವರ್ಷಗಳಿಂದ ನಗರದ ನಿವಾಸಿಯಾಗಿರಬೇಕು. ಈ ಯೋಜನೆಯಲ್ಲಿ ಶೇ. 30 ರಷ್ಟು ಫ್ಲಾಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಹತ್ತಿರದ ‘ಮೀಸೇವಾ’ ಕೇಂದ್ರಗಳು, ಮೀಸೇವಾ ಪೋರ್ಟಲ್ ಅಥವಾ ಅಧಿಕೃತ ವಾಟ್ಸಾಪ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !