ರಾಜ್ಯಸಭೆಯಲ್ಲಿ ಅಶಿಸ್ತು ವರ್ತನೆ: ಟಿಎಂಸಿ ಸಂಸದ ಡರೇಕ್ ಒಬ್ರಿಯಾನ್ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಅಶಿಸ್ತು ತೋರಿದ ಟಿಎಂಸಿ ಸಂಸದ ಡರೇಕ್ ಒಬ್ರಿಯಾನ್ ಅವರನ್ನು ಅಮಾನತು ಮಾಡಲಾಗಿದೆ.

ಸಂಸತ್ ಮೇಲಿನ ದಾಳಿ ವಿಚಾರ ಸಂಬಂಧ ಭಾರಿ ಪ್ರತಿಭಟನೆ ನಡೆಸಿದ ಡರೇಕ್ ಒಬ್ರಿಯಾನ್ ಅವರನ್ನು ಸಭಾಪತಿ ಜಗದೀಪ್ ಧನ್ಕರ್ ತಕ್ಷಣವೇ ಅಮಾನತು ಮಾಡಿದ್ದಾರೆ. ಚಳಿಗಾಲದ ಅಧಿವೇಶನ ಮುಗಿಯುವರೆಗೂ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳದಂತೆ ಅಮಾನತು ಮಾಡಲಾಗಿದೆ.

ಸಂಸತ್ ಭವನದ ಮೇಲೆ ದಾಳಿ ಮಾಡಿ ಘಟನೆ ಸಂಬಂಧಿಸಿ ಇಡೀ ದಿನ ಚರ್ಚೆಗೆ ಅವಕಾಶ ನೀಡುವಂತೆ ಟಿಎಂಸಿ ಸಂಸದ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸದನದ ಬಾವಿಗಿಳಿದು ಪ್ರತಿಭಟಿಸಿದ ಡರೇಕ್ ಒಬ್ರಿಯಾನ್ ಅತೀರೇಖವಾಗಿ ವರ್ತಿಸಿದ್ದಾರೆ. ಸಭಾಪತಿ ಧನ್ಕರ್ ಹಲವು ಭಾರಿ ಎಚ್ಚರಿಕೆ ನೀಡಿದರೂ ಡರೇಕ್ ಮಾತ್ರ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಸಭಾಪತಿ ಮಾತನ್ನು ಧಿಕ್ಕರಿಸಿದ ಡರೇಕ್ ಒಬ್ರಿಯಾನ್ ಈ ವಿಚಾರದಲ್ಲಿ ಯಾವುದೇ ನಿಮಯ ಗೌರವಿಸುವುದಿಲ್ಲ ಎಂದಿದ್ದಾರೆ. ದುರ್ನಡತೆ, ಅಶಿಸ್ತಿನ ನಡೆಯಿಂದ ಕೆರಳಿದ ಸಭಾಪತಿ ತಕ್ಷಣವೇ ಸದನದಿಂದ ಹೊರನಡೆಯಲು ಸೂಚಿಸಿದ್ದಾರೆ. ಬಳಿಕ ಅಮಾನತು ನಿರ್ಧಾರ ಘೋಷಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!