ಇಂಡೋನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 271ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನ ಏರಿಕೆ ಕಾಣುತ್ತಿದ್ದು, 271 ಮಂದಿ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕುಸಿದ ಮನೆಯ ಅವಶೇಷಗಳಡಿ ಎರಡು ವರ್ಷದ ಬಾಲಕನೊಬ್ಬ ಸಿಲುಕಿದ್ದ. ಆತ ತನ್ನ ಅಜ್ಜಿಯ ಶವದೊಂದಿದೆ ಎರಡು ದಿನದಿಂದ ಸಿಲುಕಿದ್ದ ಎನ್ನಲಾಗಿದೆ. ರಕ್ಷಣಾ ತಂಡಗಳು ಆತನನ್ನು ಜೀವಂತವಾಗಿ ರಕ್ಷಿಸಿವೆ.

ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ಭೂಕಂಪನದ ನಂತರ ಜೋರು ಮಳೆ ಸುರಿದಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಭೂಕಂಪನದಿಂದ 2,043 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 600ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ತಂಡಕ್ಕೆ ಹೆಚ್ಚು ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆಶ್ರಯ ಪ್ರದೇಶಗಳಿಗೆ ನೀರು, ಆಹಾರ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!