ಅಮೃತಯಾತ್ರೆ: ಭಾರತೀಯ ಮಸಾಲೆಗಳಿಗೆ ಜಗತ್ತು ಮಾರುಹೋಗಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಹೇಳಿಕೊಳ್ಳಬಹುದಾದ ಇನ್ನೊಂದೆ ಸಾಧನೆಯೆಂದರೆ ಜಗತ್ತಿಗೆ ಭಾರತೀಯ ಮಸಾಲೆಗಳ ರಫ್ತು ಏರಿಕೆಯಾಗಿದ್ದು. ಸ್ವಾತಂತ್ರ್ಯಾಪೂರ್ವದಿಂದಲೂ ಭಾರತದ ಮಸಾಲೆಗಳಿಗೆ ಜಗತ್ತಿನೆಲ್ಲೆಡೆ ಬೇಡಿಕೆಯಿತ್ತು. ಭಾರತದ ಕಾಳುಮೆಣಸನ್ನು ಖರೀದಿಸಲೆಂದೇ ಯುರೋಪ್‌ ನಂತಹ ದೇಶಗಳು ವ್ಯಾಪಾರಿಗಳನ್ನು ಕಳುಹಿಸುತ್ತಿದ್ದರು. 200 ವರ್ಷ ಭಾರತವನ್ನಾಳಿದ ಈಸ್ಟ್‌ ಇಂಡಿಯಾ ಕಂಪನಿ ಕೂಡ ಇಂತಹ ಮಸಾಲೆಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡು ಭರ್ಜರಿ ಲಾಭ ಗಳಿಸಿತ್ತು.

ಭಾರತೀಯ ಮಸಾಲೆಗಳಿಗಿರುವ ಶಕ್ತಿಯದು. ಇಂದಿಗೂ ಕೂಡ ಭಾರತದ ಕಾಳುಮೆಣಸು ಇತ್ಯಾದಿಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. 1960-61 ರ ಸಂದರ್ಭದಲ್ಲಿ 47.2 ಸಾವಿರ ಟನ್‌ ಗಳಷ್ಟು ಮಸಾಲೆಗಳು ರಫ್ತಾಗುತ್ತಿದ್ದವು. ಇದು 2020-21ರ ಸಮಯಕ್ಕೆ 15 ಪಟ್ಟು ಹೆಚ್ಚಾಗಿದೆ. 2020-21ರಲ್ಲಿ 1,607 ಸಾವಿರ ಟನ್‌ ಮಸಾಲೆಗಳನ್ನು ಹೊರದೇಶಗಳಿಗೆ ರವಾನಿಸಲಾಗಿದೆ.

1960-61 ರಲ್ಲಿ 17 ಕೋಟಿ ರೂ,ಗಳಷ್ಟಿದ್ದ ಮಸಾಲೆ ರಫ್ತಿನ ಮೌಲ್ಯ 2020-21ರ ಹೊತ್ತಿಗೆ 29,529 ಕೋಟಿ ರೂ.ಗೆ ತಲುಪಿದೆ. ಅಂದರೆ ಮೌಲ್ಯದಲ್ಲಿ ಸರಿಸುಮಾರು 120ಪಟ್ಟು ಹೆಚ್ಚಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!