ಇಂಡೋನೇಷ್ಯಾ ಭೂಕಂಪ ದುರಂತ: ಸಾವಿನ ಸಂಖ್ಯೆ 268 ಕ್ಕೆ ಏರಿಕೆ, 151 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರದಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನವು ಭಾರೀ ಹಾನಿಯನ್ನುಂಟುಮಾಡಿದೆ. ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ಏಜೆನ್ಸಿಯ ಮುಖ್ಯಸ್ಥರ ಪ್ರಕಾರ, ಈ ದುರಂತದಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 268ಕ್ಕೆ ತಲುಪಿದೆ. ಇನ್ನೂ 151 ಮಂದಿ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ. ಭೂಕಂಪದ ತೀವ್ರತೆ ಹೆಚ್ಚಿರುವ ಕಾರಣ ಆ ಪ್ರದೇಶದಲ್ಲಿನ ಬಹುತೇಕ ಮನೆಗಳು ನೆಲದ ಮಟ್ಟಕ್ಕೆ ಕುಸಿದಿರುವ ಅವಶೇಷಗಳನ್ನು ತೆಗೆಯಲಾಗುತ್ತಿದೆ. ಈ ಕ್ರಮದಲ್ಲಿ ಮೃತದೇಹಗಳ ರಾಶಿಗಳು ಹೊರ ಹೊಮ್ಮುತ್ತಿವೆ. ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ.

ಭೂಕಂಪದ ಕಂಪನಗಳು ಪ್ರಬಲವಾಗಿದ್ದರಿಂದ ಭೂಮಿ ಕೆಲವು ನಿಮಿಷಗಳ ಕಾಲ ಕಂಪಿಸಿತು. US ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿ ಕೇಂದ್ರೀಕೃತವಾಗಿತ್ತು. ಭೂಕಂಪ ಪೀಡಿತ ಪ್ರದೇಶಗಳಲ್ಲಿ 22,000 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಇವರೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಕಂಪದ ನಂತರ ನಗರದ ಸಯಾಂಗ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ವೈದ್ಯರು ಸಂತ್ರಸ್ತರಿಗೆ ತಕ್ಷಣ ಚಿಕಿತ್ಸೆ ನೀಡಲು ಸಾಧ್ಯವಾಗದೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗೆ ತಲುಪಿದ ನಂತರ ಹಲವರು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಸಿಯಾಂಜೂರ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಅಲ್ಲಿನ ಪರಿಸ್ಥಿತಿಯ ವಿಡಿಯೋ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here