ಮರಗಳಿಗೂ ಬಂತು ಆಂಬುಲೆನ್ಸ್- ಮಧ್ಯಪ್ರದೇಶದಲ್ಲೊಂದು ಪರಿಸರ ಕಾಳಜಿ ಮಾದರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಇಂದೋರ್ ಈಗ ‘ಟ್ರೀ ಆಂಬ್ಯುಲೆನ್ಸ್’ ಅನ್ನು ಪಡೆದುಕೊಂಡಿದೆ, ಇದು ನಗರದಲ್ಲಿನ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಸ್ವಚ್ಛತೆಯಲ್ಲಿ ಸತತವಾಗಿ ನಂಬರ್ ಒನ್ ಸ್ಥಾನದಲ್ಲಿರುವ ಕ್ಲೀನ್ ಸಿಟಿ ಇಂದೋರ್ ಇದೀಗ ಗ್ರೀನ್ ಸಿಟಿ ಆಗುವತ್ತಲೂ ಸಾಗುತ್ತಿದೆ.

ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ನಗರವನ್ನು ಹಸಿರಾಗಿಡಲು, ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ರಾಜಧಾನಿಯಲ್ಲಿ ಹಸಿರು ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಈ ‌ʻಟ್ರೀ ಆಂಬುಲೆನ್ಸ್ʼ ವಾಹನಗಳನ್ನು ಸ್ಥಾಪಿಸಿದೆ.

ಈ ವಾಹನಗಳು ನಗರದ ಸುತ್ತಮುತ್ತಲಿನ ಮರಗಳನ್ನು ಆರೋಗ್ಯವಾಗಿಡಲು ಮತ್ತು ಅವುಗಳನ್ನು ಕಾಪಾಡಿಕೊಳ್ಳಲು ಕಾರ್ಯನಿರ್ವಹಿಸುತ್ತದೆ.  ಮಹಾನಗರ ಪಾಲಿಕೆಯ ಕಾರ್ಯಾಗಾರದಲ್ಲಿಯೇ ಈ ಆಂಬ್ಯುಲೆನ್ಸ್ ಸಿದ್ಧಪಡಿಸಲಾಗಿದ್ದು, ಅನಾರೋಗ್ಯ, ಹುಳು ಬಾಧಿತ ಮರಗಳು ಮತ್ತು ಗಿಡಗಳಿಗೆ ಚಿಕಿತ್ಸೆ ನೀಡಲಿದೆ. ಆಂಬುಲೆನ್ಸ್‌ನಲ್ಲಿ ಮರ/ಗಿಡಗಳಿಗೆ ನೀರಿ ಸಿಂಪಡನೆ, ಔಷಧಿ ಸಿಂಪಡನೆ, ಕತ್ತರಿಸುವ ಉಪಕರಣಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಇವೆ.

ಈ ಬಗ್ಗೆ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ್ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ, ʻಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಜೀವವೈವಿಧ್ಯ ರಕ್ಷಣೆಗಾಗಿ ಸ್ಥಾಪಿಸಲಾದ ಟ್ರೀ ಆಂಬ್ಯುಲೆನ್ಸ್ ಸ್ಪ್ರಿಂಕ್ಲರ್‌ಗಳು, ನೀರಿನ ವ್ಯವಸ್ಥೆ, ಔಷಧಗಳು ಮತ್ತು ಇತರ ಉಪಕರಣಗಳಂತಹ ಅಗತ್ಯತೆಗಳೊಂದಿಗೆ ಇಂದೋರ್‌ ಸದಾ ಹಸಿರಾಗಿರುವಂತೆ ಕಾಪಾಡಿಕೊಳ್ಳುತ್ತೇವೆʼ. ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯಿಂದ ಈ ಟ್ರೀ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ ಎಂಬುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!