ಬಿಕ್ಕಟ್ಟಿನಲ್ಲಿರುವ ಲಂಕಾಗೆ ಭಾರತದಿಂದ ವೈದ್ಯಕೀಯ ನೆರವು: ಕೊಲಂಬೊ ತಲುಪಿದ ಮೆಡಿಕಲ್‌ ಕಿಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ಸರ್ಕಾರಕ್ಕೆ ಭಾರತ ಮತ್ತೊಂದು ಸಹಾಯ ಹಸ್ತ ಚಾಚಿದೆ. ಕೊಟ್ಟ ಮಾತಿನಂತೆ ಮೆಡಿಸಿನ್‌ ಕಿಟ್‌ ಕಳುಹಿಸಿಕೊಟ್ಟಿದೆ.

ಶ್ರೀಲಂಕಾ ಸರ್ಕಾರದಿಂದ ವಿನಂತಿಸಲಾದ ನಿರ್ಣಾಯಕ ಮೆಡಿಕಲ್ ಕಿಟ್‌ಗಳನ್ನು (260 ಕೆಜಿ/107 ಬಾಕ್ಸ್‌ಗಳು) ಹೊತ್ತು ಐಎನ್‌ಎಸ್ ಘರಿಯಾಲ್ ಇಂದು ಕೊಲಂಬೋ ತಲುಪಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ವೈದ್ಯಕೀಯ ಸೌಲಭ್ಯಗಳ ತ್ವರಿತ ವಿತರಣೆಗಾಗಿ ಭಾರತ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!