Saturday, February 4, 2023

Latest Posts

ಐಎನ್‌ಎಸ್ ರಣ್‌ವೀರ್‌ನಲ್ಲಿ ಸ್ಫೋಟ: ನೌಕಾಸೇನೆಯ ಮೂವರು ಸಿಬ್ಬಂದಿ ಸಾವು, 11 ಮಂದಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್ ರಣ್‌ವೀರ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ರಣ್‌ವೀರ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಒಟ್ಟಾರೆ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಯುದ್ಧನೌಕೆಯ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ನೌಕೆಯ ಬೆಂಕಿ ಹತೋಟಿಕೆ ತರಲಾಗಿದ್ದು, ದೊಡ್ಡ ಅನಾಹುತ ತಪ್ಪಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಐಎನ್‌ಎಸ್ ರಣ್‌ವೀರ್ ನ.2021ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಗೆ ನಿಯೋಜನೆಗೊಂಡಿತ್ತು. ಇನ್ನೇನು ಕೆಲವೇ ದಿನದಲ್ಲಿ ಬೇಸ್‌ಪೋರ್ಟ್‌ಗೆ ಮರಳಬೇಕಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!