ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಂಟ್ರಲ್ ಲಂಡನ್‌ನಲ್ಲಿರುವ ತಮ್ಮ ಐಷಾರಾಮಿ ನಿವಾಸ ತೊರೆಯುವಂತೆ ಉದ್ಯಮಿ ವಿಜಯ್ ಮಲ್ಯಗೆ ಬ್ರಿಟನ್ ಕೋರ್ಟ್ ಹೇಳಿದೆ.
ಆಸ್ತಿ ಪರಭಾರೆ ಪ್ರಕರಣದಲ್ಲಿ ಸ್ವಿಸ್ ಬ್ಯಾಂಕ್ ಯುಬಿಎಸ್ ಗೆಲುವು ಸಾಧಿಸಿದ್ದು, ಲಂಡನ್‌ನ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು ಯುಬಿಎಸ್ ಬ್ಯಾಂಕ್ ಪಡೆದುಕೊಂಡಿದೆ.
ಲಂಡನ್ ಮನೆಯಲ್ಲಿ ಮಗ ಸಿದ್ಧಾರ್ಥ್ ಹಾಗೂ ತಾಯಿ ಲಲಿತಾ ಜೊತೆ ಮಲ್ಯ ವಾಸವಿದ್ದಾರೆ. 2020 ರಿಂದಲೂ ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡದೇ, ಕೋವಿಡ್‌ನಿಂದಾಗಿ ಮನೆ ಬಿಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದರು. ಆದರೆ ಇದೀಗ ಮನೆ ಖಾಲಿ ಮಾಡುವುದು ಅನಿವಾರ್ಯವಾಗಿದೆ.
ಮಂಗಳೂರು ಮೂಲದ ಉದ್ಯಮಿ ಮಲ್ಯ ಲಂಡನ್‌ನಲ್ಲಿ ಐಷಾರಾಮಿ ಮನೆ ಕಟ್ಟಿದ್ದು, ಇದನ್ನು ಕೋಟ್ಯಂತರ ರೂ. ಸಾಲಕ್ಕಾಗಿ ಯುಎಸ್‌ಬಿ ಬ್ಯಾಂಕ್‌ಗೆ ಮಾರ್ಟ್‌ಗೇಜ್ ಮಾಡಿದ್ದರು. ಸಾಲ ತೀರಿಸಲು ಮಲ್ಯ ಅಸಹಾಯಕರಾಗಿರೋದ್ರಿಂದ ಮನೆ ಸ್ವಾಧೀನಕ್ಕೆ ಅವಕಾಶ ನೀಡಲು ಯುಬಿಎಸ್ ಬ್ಯಾಂಕ್ ಲಂಡನ್ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.