Saturday, June 25, 2022

Latest Posts

ತಂತ್ರಜ್ಞಾನ ಕಲಿಕೆಯ ಮಹಾವೇದಿಕೆ ಇನ್‌ಸಿಗ್ನಿಯಾ..!

– ನಿತೀಶ ಡಂಬಳ

ಭಾರತ ಬದಲಾಗುತ್ತಿದೆ. ನಿತ್ಯವೂ ನೂತನ ತಂತ್ರಜ್ಞಾನ, ಆವಿಷ್ಕಾರಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳ ಯಶಸ್ಸನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಒಂದು ಗಮನಾರ್ಹ ಸಂಗಿತಿಯೆಂದರೆ ಈ ಎಲ್ಲ ನೂತನ ಆವಿಷ್ಕಾರ, ವೈಜ್ಞಾನಿಕ ಪ್ರಯೋಗಗಳು, ತಾಂತ್ರಿಕತೆಯ ಹಿಂದಿರುವುದು ನಮ್ಮ ದೇಶದ ಯುವಪಡೆ.

ಇಂದಿನ ಯುವಪೀಳಿಗೆಗೆ ಶಿಕ್ಷಣ, ತರಬೇತಿ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಉತ್ತಮ ವೇದಿಕೆ ಒದಗಿಸುವುದು. ಅಂತಹ ಒಂದು ವಿಶಿಷ್ಟ ಕಾರ್ಯವನ್ನು ಧಾರವಾಡದ ಎಸ್‌ಡಿಎಮ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಮಹಾವಿದ್ಯಾಲಯ ಕಳೆದ ೧೦ ವರ್ಷಗಳಿಂದ ಇನ್‌ಸಿಗ್ನಿಯಾ ಎಂಬ ಹೆಸರಿನಲ್ಲಿ ಮಾಡುತ್ತಿದೆ. 2012ರಲ್ಲಿ ಆರಂಭವಾದ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಚಾಲನೆ ನೀಡಿದ್ದು ಉಲ್ಲೇಖನಿಯ.

ಇನ್‌ಸಿಗ್ನಿಯಾ ತಾಂತ್ರಿಕ ಹಾಗೂ ಸಾಂಸ್ಕೃತಿಕತೆಯ ಸಂಗಮ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯಾಧಾರಿತ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಸ್‌ಡಿಎಮ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ದೊರಕಿಸಿಕೊಡುತ್ತಿದೆ.

ಸರ್ವತೋಮುಖ ಬೆಳವಣಿಗೆಗೆ ಆದ್ಯತೆ: ಎಂಜಿನಿಯರ್ ವಿದ್ಯಾರ್ಥಿಗಳು ಕೇವಲ ತಮ್ಮ ವಿಷಯದಲ್ಲಷ್ಟೇ ನಿಪುಣರಾದರೆ ಸಾಲದು. ಬದಲಾಗಿ ಉತ್ತಮ ಸಂವಹನ, ನಾಯಕತ್ವ ಗುಣ, ಕೌಶಲ್ಯ ನಿರ್ಮಾಣ, ಪಠ್ಯೇತರ ಕಾರ್ಯಗಳಲ್ಲಿ ಸಾಧನೆ ಮಾಡಲು ಇನ್‌ಸಿಗ್ನಿಯಾ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ.

ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ಕೋಡಿಂಗ್, ಟೆಕ್ನಿಕಲ್ ಕ್ವಿಜ್, ಟೆಜರ್ ಹಂಟ್, ಮಾಡಲಿಂಗ್ ಚಾಲೆಂಜ್, ಮ್ಯಾಥ್ ಹಂಟ್, ಬ್ರೇನ್ ಸ್ಟಾರ್ಮ್, ರೈಡರ್ ಮೆನಿಯಾ, ಕೆಮ್ ಕಾಸ್ಟ್, ಟೆಕ್ ಪೈರೆಟ್ಸ್ ಮುಂತಾದ ಪಠ್ಯಾಧಾರಿತ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಸರಳಗೊಳಿಸಿ, ಪ್ರಾಯೋಗಕ ಕಲಿಕೆಗೆ ಮಹತ್ವ ನೀಡಲಾಗುತ್ತಿದೆ. ಪೆಪರ್ ಪ್ರೆಸೆಂಟೆಷನ್, ಚರ್ಚೆ, ಅಣಕು ಸಂಸತ್ತು, ಅಣಕು ಮಾಧ್ಯಮ ಗೋಷ್ಠಿ, ಮ್ಯಾಡ್ ಆಡ್, ಫೊಟೊಗ್ರಾಫಿ, ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿವೆ.

ನೃತ್ಯ, ಸಂಗೀತ, ವಾದ್ಯ ಸಂಗೀತ, ಕಿರು ನಾಟಕ, ಬೀದಿ ನಾಟಕ, ಚಿತ್ರಕಲೆ, ಕೊಲ್ಯಾಜ್, ಫೇಸ್ ಪೆಂಟಿಂಗ್‌ನಂತಹ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ ಅನವಾರಣಗೊಳಿಸುವಲ್ಲಿ ಸಹಕಾರಿಯಾಗಿದೆ. ಒಟ್ಟಾರೆ ಇನ್‌ಸಿಗ್ನಿಯಾ ವಾತಾವರಣ ಪ್ರತಿವರ್ಷ ಪಠ್ಯ ಹಾಗೂ ಪಠ್ಯೇತರ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತಿದ್ದು, ವಿದ್ಯಾರ್ಥಿಗಳೂ ಸಹ ಸಿಕ್ಕ ಅವಕಾಶ ಸದ್ವಿನಿಯೋಗಿಸುಕೊಂಡು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಜೂನ್ 10 ಹಾಗೂ 11ರಂದು ನಡೆದ ಇನ್‌ಸಿಗ್ನಿಯಾ ಫೆಸ್ಟ್‌ನಲ್ಲಿ ರಾಜ್ಯದ ಉಜಿರೆ, ಮೂಡಬಿದಿರೆ, ಕಲಬುರ್ಗಿ, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ಮಂಗಳೂರು, ದಾವಣಗೆರೆ ಸೇರಿದಂತೆ 24 ಎಂಜಿನಿಯರಿಂಗ್ ಕಾಲೇಜುಗಳಿಂದ 2000 ವಿದ್ಯಾರ್ಥಿಗಳು 79 ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss