ಪೊಲೀಸ್, ಹಾಗೂ ಇತರ ಪಡೆಗಳಲ್ಲಿ ʼಅಗ್ನಿವೀರʼರಿಗೆ ಆದ್ಯತೆ : ಯೋಗಿ ಸರ್ಕಾರದ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿಗೆ ಘೋಷಣೆಯಾಗಿರುವ ʼಅಗ್ನಿಪಥʼ ಯೋಜನೆಯ ಅಡಿಯಲ್ಲಿ ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಯುವಕರಿಗೆ ರಾಜ್ಯ ಪೋಲೀಸ್‌ ಮತ್ತು ಇತರ ಸಶಸ್ತ್ರ ಪಡೆಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಉತ್ತರ ಪ್ರದೇಶದ ಯೋಗಿ ಸರ್ಕಾರ ಘೋಷಿಸಿದೆ.

ಈ ಕುರಿತು ಟ್ವೀಟರ್‌ನಲ್ಲಿ ಘೋಷಣೆ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್‌ “ಪೋಲಿಸ್ ಮತ್ತು ಪೊಲೀಸ್ ಅಲೈಡ್ ಫೋರ್ಸ್‌ಗಳಲ್ಲಿಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು” ಎಂದಿದ್ದಾರೆ. ಅಗ್ನಿಪಥ್‌ ಯೋಜನೆಯು ಯುವಕರನ್ನು ರಾಷ್ಟ್ರ ಮತ್ತು ಸಮಾಜದ ಸೇವೆಗೆ ಸಿದ್ಧಪಡಿಸುತ್ತದೆ ಮತ್ತು ಅವರಿಗೆ ಹೆಮ್ಮೆಯ ಭವಿಷ್ಯದ ಅವಕಾಶವನ್ನು ನೀಡುತ್ತದೆ ಎಂದು ಯೋಗಿ ಹೇಳಿದ್ದಾರೆ.

ಇದೇ ರೀತಿಯ ಇನ್ನೊಂದು ಘೋಷಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಡಿದ್ದು ‘ಅಗ್ನಿವೀರ್‌ಗಳಿಗೆ’ ಅರೆಸೈನಿಕ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಉದ್ಯೋಗಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾ ಹೇಳಿದ್ದಾರೆ.

“ಅಗ್ನಿಪಥ ಯೋಜನೆಯು ಯುವಕರ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಮತ್ತು ಸ್ವಾಗತಾರ್ಹ ನಿರ್ಧಾರವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಈ ಯೋಜನೆಯಡಿಯಲ್ಲಿ 4 ವರ್ಷಗಳನ್ನು ಪೂರ್ಣಗೊಳಿಸುವ ಅಗ್ನಿವೀರ್‌ಗಳಿಗೆ ಆದ್ಯತೆ ನೀಡಲು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ನಿರ್ಧರಿಸಿದೆ ” ಎಂದು ಗೃಹ ಸಚಿವರ ಕಚೇರಿ ಟ್ವೀಟ್ ಮಾಡಿದ್ದು “ಈ ನಿರ್ಧಾರದ ಬಗ್ಗೆ ವಿವರವಾದ ಯೋಜನೆ ಈಗಾಗಲೇ ಪ್ರಾರಂಭವಾಗಿದೆ” ಎಂದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!