‘ನೀವು ಎಲ್ಲರಿಗೂ ಸ್ಫೂರ್ತಿ’: ಸಾನಿಯಾ ಮಿರ್ಜಾಗೆ ಬಾಲಿವುಡ್ ಸಲ್ಯೂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದು ನನ್ನ ಕಡೆಯ ಸೀಸನ್ ಎಂದು ಹೇಳಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ್ದಾರೆ.
ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆಗೆ ಬಾಲಿವುಡ್ ಪ್ರತಿಕ್ರಿಯೆ ನೀಡಿದೆ. ನಟ ರಣ್‌ವೀರ್ ಸಿಂಗ್ ‘ಸಾನಿಯಾ ಮಿರ್ಜಾ ನೀವು ಕ್ವೀನ್’ ಎಂದು ಹೇಳಿದ್ದಾರೆ. ಇನ್ನು ಅರ್ಜುನ್ ಕಪೂರ್ ಕೂಡ ‘ಹಲವಾರು ಮಂದಿಗೆ ನೀವು ಸ್ಫೂರ್ತಿ’ ಎಂದಿದ್ದಾರೆ.
ಸಾನಿಯಾ ನಿರ್ಧಾರ ಪ್ರಕಟಿಸಿದ ಕೆಲವೇ ಸೆಕೆಂಡುಗಳಲ್ಲಿ ಟ್ವಿಟರ್‌ಗಳ ಟ್ರೆಂಡಿಂಗ್ ಪಟ್ಟಿಯಲ್ಲಿ ಈ ವಿಚಾರ ಅಗ್ರಸ್ಥಾನದಲ್ಲಿತ್ತು.
ನಿವೃತ್ತಿ ಘೋಷಣೆಗೆ ಹಲವು ಕಾರಣಗಳಿವೆ. ದೇಹ ಆಟಕ್ಕೆ ಸಹಕರಿಸುತ್ತಿಲ್ಲ. ಮೊಣಕಾಲಿನ ನೋವು ಹೆಚ್ಚಾಗಿದೆ. ಒಂದು ಸಣ್ಣ ನೋವಾದರೂ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತಿದೆ. ಇನ್ನು ನನ್ನ ಮಗನಿಗೆ ಮೂರು ವರ್ಷ. ನಾನು ಎಲ್ಲಿ ಹೋದರೂ ಅವನನ್ನು ಕರೆದುಕೊಂಡು ಬರುತ್ತೇನೆ. ಸಣ್ಣವನನ್ನು ಅಂತಾರಾಷ್ಟ್ರೀಯ ಪ್ರಯಾಣ ಮಾಡಿಸುವುದು ರಿಸ್ಕ್ ಎನಿಸುತ್ತದೆ. ಎಲ್ಲ ವಿಚಾರಗಳನ್ನು ಕೂಲಂಕಷವಾಗಿ ಆಲೋಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!