Monday, October 2, 2023

Latest Posts

POSITIVE STORY| ಅಮ್ಮನ ಇಷ್ಟವನ್ನು ಈಡೇರಿಸಿದ ಮಗ: ಟ್ವಿಟ್ಟರ್‌ನಲ್ಲಿ ವೈರಲ್ ಆಗ್ತಿದೆ ಆಯುಷ್ ಗೋಯಲ್ ಕಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಣ್ಣಪುಟ್ಟ ಕೆಲಸ ಮಾಡಿಕೊಂಡು ಅಮ್ಮನ ಕಷ್ಟಗಳನ್ನು ಕಣ್ಣಾರೆ ಕಂಡ ಮಗ ಈಗ ತನ್ನ ತಾಯಿಯ ಆಸೆಯನ್ನು ಈಡೇರಿಸಿದ ಮನಸಿಗೆ ಮುದ ನೀಡುವ ಕಥೆಯಿದು. ಮನೆಯಲ್ಲೇ ಇದ್ದು, ಹೆಂಡತಿ ಮತ್ತು ತಾಯಿ ಪಾತ್ರವನ್ನು ಸರಿಯಾಗಿ ನಿಭಾಯಿಸಬೇಕೆಂಬ ಅವರ ಆಸೆಯನ್ನು ಈಡೇರಿಸಿರುವ ಸ್ಪೂರ್ತಿದಾಯಕ ಮಗನ ಕಥೆ.

ಆಯುಶ್ ಗೋಯಲ್ ತನ್ನ ತಾಯಿಯ ನೆಚ್ಚಿನ ಕೆಲಸವನ್ನು ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಅವರ ತಾಯಿಯ ಬಗ್ಗೆ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಆಯುಷ್ ಗೋಯಲ್ ಅವರ ತಾಯಿಗೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಆದರೆ ಮನೆಯಲ್ಲಿ ಕಷ್ಟವಿದ್ದರಿಂದ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೆಲಸ ಮಾಡಬೇಕಿತ್ತು. ಇಷ್ಟು ದುಡಿದರೆ ಅವಳ ಸಂಬಳ ಕೇವಲ 5,771 ರೂ. ಆಕೆಯ ಸಂಬಳ ಆಯುಷ್‌ನ ಕಾಲೇಜು ಶುಲ್ಕಕ್ಕೂ ಸಾಕಾಗುತ್ತಿರಲಿಲ್ಲ. ಉದ್ಯೋಗಕ್ಕಿಂತ ಜವಾಬ್ದಾರಿಯುತ ಹೆಂಡತಿ ಮತ್ತು ಮಕ್ಕಳಿಗೆ ತಾಯಿಯಾಗುವುದು ಅವಳ ಕನಸು.

ತನ್ನ ತಾಯಿಯ ಇಚ್ಛೆಯನ್ನು ಗಮನಿಸಿದ ಆಯುಷ್ ತನ್ನ ಅಕೌಂಟೆಂಟ್ ಕೆಲಸವನ್ನು ತೊರೆದು, ಕೆಲವರ ನೆರವಿನಿಂದ ಆನ್‌ಲೈನ್‌ನಲ್ಲಿ ಬರೆಯಲಾರಂಭಿಸಿದರು. ತಾಯಿಯ ಸಣ್ಣ ಕೆಲಸವನ್ನು ಬಿಡುವಂತೆ ಹೇಳಿ ಅವಳ ಕನಸನ್ನು ನನಸು ಮಾಡಿದ. ಈಗ ಅವಳು ಸಂತೋಷದಿಂದ ಮನೆಗೆಲಸದಲ್ಲಿ ನಿರತಳಾಗಿದ್ದಾಳೆ. ಇದನ್ನು ಸ್ವತಃ ಆಯುಷ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ತಾಯಿಯ ಕನಸು ನನಸಾಗಿದೆ..764 ಗೆಳೆಯರಿಗೆ ಥ್ಯಾಂಕ್ಸ್’ ಎಂದು ಅಮ್ಮನ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಆಯುಷ್ ತನ್ನ ಕಠಿಣ ಪರಿಶ್ರಮದ ಮೂಲಕ ತನ್ನ ತಂದೆಯನ್ನು ಮೊದಲ ಬಾರಿಗೆ ವಿಮಾನ ಏರಿಸಿದ್ದಾನೆ. ತಂದೆ ಸಂತೋಷವನ್ನು ಇಮ್ಮಡಿಗೊಳಿಸಿದ ಇದೀಗ ಆಯುಷ್ ಕುಟುಂಬ ಚಿಕ್ಕ ಕೊಠಡಿಯಿಂದ ಡಬಲ್ ಬೆಡ್ ರೂಮ್ ಅಪಾರ್ಟ್ ಮೆಂಟ್ ಗೆ ಶಿಫ್ಟ್ ಆಗಿದೆ. ಕುಟುಂಬದ ಆಸೆಯನ್ನು ಈಡೇರಿಸಲು ಕಷ್ಟಪಡುತ್ತಿರುವ ಆಯುಷ್‌ಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಪೋಷಕರ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!