ʻರಾಕಿಭಾಯ್‌ʼನಂತಾಗಲು 1ಪ್ಯಾಕೆಟ್‌ ಸಿಗರೇಟ್‌ ಸೇದಿದ ಬಾಲಕ: ತಪ್ಪಿದ ಅಪಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಸ ತಲೆಮಾರಿನ ಸಿನಿಮಾಗಳು ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತಿವೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.  ಸಿನಿಮಾ ಹೀರೋಗಳ ಜಾಗದಲ್ಲಿ ತಮ್ಮನ್ನು ಬಿಂಬಿಸಿಕೊಂಡು ಅಪ್ರಾಪ್ತ ವಯಸ್ಸಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಕೆಜಿಎಫ್2 ಸಿನಿಮಾ ನೋಡಿದ 15ರ ಹರೆಯದ ಹುಡುಗ ತಕ್ಷಣ ಹೀರೋ ಕ್ಯಾರೆಕ್ಟರ್ ‘ರಾಕಿ ಭಾಯ್’ನನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಂಡು, ನಾಯಕನ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡು ಒಂದು ಪ್ಯಾಕೆಟ್ ಸಿಗರೇಟನ್ನು ಒಂದರ ಹಿಂದೆ ಒಂದರಂತೆ ಸೇದಿದ್ದಾನೆ. ಈ ಗಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದ್ದು, ಬಾಲಕ ಇದೀಗ ಆಸ್ಪತ್ರೆ ಪಾಲಾಗಿದ್ದಾನೆ.

ಸಿಗರೇಟ್‌ ಸೇದುತ್ತಿದ್ದಂತೆ ಗಂಟಲು ನೋವು, ಆತಿಯಾದ ಕೆಮ್ಮಿನಿಂದ ನರಳಿದ್ದಾನೆ. ಕೂಡಲೇ ಬಾಲಕನ ಪೋಷಕರು ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಏನೂ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿಸ ಮೇಲೆ ಹೆತ್ತವರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.  ‘ರಾಕಿ ಭಾಯಿ’ಯಂತಹ ಸಿನಿಮಾ ಪಾತ್ರಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಮಕ್ಕಳು ಸಮಾಜದ ಬಗ್ಗೆ ವಿಪರೀತ ಮನೋಭಾವ ತೋರುತ್ತಿದ್ದಾರೆ, ಪಾಲಕರು ತಮ್ಮ ಮಕ್ಕಳ ಮೇಲೆ ಕಣ್ಣಿಟ್ಟು ಅವರಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ವಿವರಿಸಬೇಕು ಎಂದು ವೈದ್ಯರು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!