ಸರ್ವರ್ ಡೌನ್ ಸಮಸ್ಯೆ ಬಗೆಹರಿದಿದೆ ಎಂದ ಇನ್ಸ್ಟಾಗ್ರಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ವರ್ ಡೌನ್ ಆಗಿ ಇನ್ಸ್ಟಾಗ್ರಾಮ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು, ಈಗ ಸಮಸ್ಯೆ ಸರಿಪಡಿಸಲಾಗಿದೆ ಎಂದು ಇನ್ಸ್ಟಾಗ್ರಾಮ್ ಸಂಸ್ಥೆ ಹೇಳಿದೆ.

ಕೆಲವು ಖಾತೆಗಳು ಅಮಾನತು ಆಗಿವೆ, ಇದಕ್ಕೆ ಕ್ಷಮೆ ಇರಲಿ ಎಂದು ಸಂಸ್ಥೆ ಹೇಳಿದೆ. ಕೆಲವೇ ದಿನಗಳ ಹಿಂದೆ ವಾಟ್ಸಾಪ್ ಕೂಡ ತಾಂತ್ರಿಕ ದೋಷ ಎದುರಿಸಿದ್ದು, ಎರಡು ಗಂಟೆಗಳ ಕಾಲ ಸ್ಥಗಿತವಾಗಿತ್ತು. ರಾತ್ರಿ ಇನ್ಸ್ಟಾಗ್ರಾಮ್ ಕೂಡ ಡೌನ್ ಆಗಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಸಂಸ್ಥೆ ಮಾಹಿತಿ ನೀಡಿತ್ತು. ತಾಂತ್ರಿಕ ದೋಷದಿಂದ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ತಮ್ಮ ಮೂರು ಮಿಲಿಯನ್ ಫಾಲೋವರ‍್ಸ್ ಕಳೆದುಕೊಂಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!