‘ನಮ್ಮ ಸಂಪಾದಕರು, ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ್ದಾರೆ’: ಪೋಲೀಸ್‌ ಶೋಧದ ನಂತರ ʼದಿ ವೈರ್‌ʼ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಳ್ಳುಸುದ್ದಿ ಪ್ರಕಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಘಟಕವು ಖಾಸಗಿ ಮಾಧ್ಯಮ ʼದಿ ವೈರ್‌ʼ ನ ಸಂಸ್ಥಾಪಕರು ಮತ್ತು ಸಂಬಂಧಪಟ್ಟವರ ನಿವಾಸಗಳನ್ನು ಶೋಧಿಸಿದ ನಂತರ ದಿ ವೈರ್ ಸುದ್ದಿ ಪೋರ್ಟಲ್‌ ಸೋಮವಾರ ಹೇಳಿಕೆಯನ್ನು ನೀಡಿದ್ದು ಅವರ ಸಂಪಾದಕರು ಮತ್ತು ಸಿಬ್ಬಂದಿ “ಸಂಪೂರ್ಣವಾಗಿ ಸಹಕರಿಸಿದ್ದಾರೆ ಮತ್ತು ಬಯಸಿದ ಸಾಧನಗಳನ್ನು ನೀಡಿದ್ದಾರೆ” ಎಂದು ಹೇಳಿದೆ.

ಸುದ್ದಿ ವೆಬ್‌ಸೈಟ್ ದಿ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂಕೆ ವೇಣು ಅವರ ಮನೆಗಳನ್ನು ಸೋಮವಾರ ದೆಹಲಿ ಪೊಲೀಸರ ಅಪರಾಧ ವಿಭಾಗವು ಶೋಧಿಸಿದೆ. ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ದೆಹಲಿ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.

ಹೇಳಿಕೆಯಲ್ಲಿ, “ನಾಲ್ವರೂ ಸಹಕರಿಸಿದರು ಮತ್ತು ಬಯಸಿದ ಸಾಧನಗಳನ್ನು ನೀಡಿದರು. ವಶಪಡಿಸಿಕೊಂಡ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಐಪ್ಯಾಡ್‌ಗಳ ಹ್ಯಾಶ್ ಮೌಲ್ಯಕ್ಕಾಗಿ ಮತ್ತು ವಶಪಡಿಸಿಕೊಂಡ ಸಾಧನಗಳ ಕ್ಲೋನ್ ಮಾಡಿದ ಪ್ರತಿಗಳನ್ನು ತಟಸ್ಥ ಸ್ಥಳದಲ್ಲಿ ಇರಿಸಲು ನಾವು ನಮ್ಮ ಬೇಡಿಕೆಯನ್ನು ದಾಖಲೆಯಲ್ಲಿ ಇರಿಸಿದ್ದೇವೆ” ಎಂದು ಹೇಳಿದೆ.

“ಈ ಸಹಕಾರದ ಹೊರತಾಗಿಯೂ, ದೆಹಲಿಯ ಭಗತ್ ಸಿಂಗ್ ಮಾರ್ಕೆಟ್‌ನಲ್ಲಿರುವ ದಿ ವೈರ್‌ನ ಕಚೇರಿಯನ್ನು ಸಹ ಶೋಧಿಸಲಾಯಿತು ಮತ್ತು ನಮ್ಮ ವಕೀಲರೊಬ್ಬರನ್ನು ಸ್ಥಳದಲ್ಲಿದ್ದ ಅಧಿಕಾರಿಗಳು ದೈಹಿಕವಾಗಿ ಹೊರಗೆ ತಳ್ಳಿದರು” ಎಂದು ದಿ ವೈರ್ ಹೇಳಿಕೊಂಡಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು 700 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಟೆಕ್ ದೈತ್ಯ ಮೆಟಾದಲ್ಲಿ ತಮ್ಮ ವಿಶೇಷ ಸವಲತ್ತುಗಳನ್ನು ಬಳಸಿದ್ದಾರೆ ಎಂದು ದಿ ವೈರ್‌ ಆಧಾರವಿಲ್ಲದ ವರದಿ ಪ್ರಕಟಿಸಿತ್ತು. ಅನೇಕ ಚರ್ಚೆಗಳ ನಂತರ ವಿವಾದದಲ್ಲಿ ಸಿಲುಕಿ ಕೊನೆಗೆ ವರದಿಯನ್ನು ಹಿಂತೆಗೆದುಕೊಂಡಿತ್ತು. ತಮ್ಮ ಖ್ಯಾತಿಗೆ ಕಳಂಕ ತರಲಾಗಿದೆ ಎಂದು ಆರೋಪಿಸಿ ಅಮಿತ್ ಮಾಳವಿಯಾ ಅವರು ದೂರು ದಾಖಲಿಸಿದ್ದರು. ಇದಾದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!