ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ದೇಶದ ಮೊದಲ ಭೂಗತ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪನೆ ಮಾಡಲಾಗಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ನಿನ್ನೆಯಷ್ಟೇ ಟ್ರಾನ್ಸ್‌ಫಾರ್ಮರ್ ಉದ್ಘಾಟನೆ ಮಾಡಿದ್ದಾರೆ.
ಮಲ್ಲೇಶ್ವರನಲ್ಲಿ ಟ್ರಾನ್ಸ್‌ಫಾರ್ಮರ್ ಸ್ಥಾಪನೆಯಾಗಿದ್ದು, ಇದಕ್ಕೆ ಒಟ್ಟಾರೆ 1.98 ಕೋಟಿ ರೂ ಖರ್ಚಾಗಿದೆ. ಬೆಸ್ಕಾಂ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಟ್ರಾನ್ಸ್‌ಫಾರ್ಮರ್ 500 ಕೆ.ವಿ.ಎ ಸಾಮರ್ಥ್ಯ ಹೊಂದಿದ್ದು, ದೇಶದಲ್ಲಿ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್ ಇದಾಗಿದೆ. ಈ ರೀತಿ ಬೇರೆ ದೇಶಗಳಲ್ಲಿ ಸಾಕಷ್ಟು ಭೂಗತ ಟ್ರಾನ್ಸ್‌ಫಾರ್ಮರ್‌ಗಳಿಗೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಈ ಕೇಂದ್ರಗಳನ್ನು ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಲಾಗಿದೆ. ಭೂಮಿಯ ಕೆಳಭಾಗದಲ್ಲಿ ಕೊಠಡಿಯೊಂದನ್ನು ನಿರ್ಮಿಸಿ ಅದರಲ್ಲಿ ಸಿಮೆಂಟ್ ಕಟ್ಟೆ ನಿರ್ಮಿಸಲಾಗುವುದು. ಕಟ್ಟೆಗಳ ಮೇಲೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ.
ಇದರಲ್ಲಿ 500 ಕೆವಿಎ ಸಾಮರ್ಥ್ಯದ ತೈಲರಹಿತ ಟ್ರಾನ್ಸ್‌ಫಾರ್ಮರ್, ಎಂಟು ವೇ ಸಾಲಿಡ್ ಸೈಟ್ ರಿಂಗ್ ಮೇನ್ ಯುನಿಟ್, ಎಲ್.ಟಿ. ವಿತರಣಾ ಪೆಟ್ಟಿಗೆ, ಯುಪಿಎಸ್, ವಾಟರ್ ಪಂಪ್ ಹಾಗೂ ಎಸಿ ವ್ಯವಸ್ಥೆ ಇದೆ. ಒಟ್ಟಾರೆ ಒಂದು ವರ್ಷದಲ್ಲಿ ಈ ಟ್ರಾನ್ಸ್‌ಫಾರ್ಮರ್ ತಯಾರಾಗಿದ್ದು, ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂಪಾಯಿ ನೀಡಿದೆ ಎನ್ನಲಾಗಿದೆ.