ಕೆಂಪೇಗೌಡರ ಮೂರ್ತಿ ಸ್ಥಾಪನೆ: ಕೂಡಲಸಂಗಮದಲ್ಲಿ ಮೃತ್ತಿಕೆ ಸಂಗ್ರಹಿಸಿದ ಸಚಿವರು

ಹೊಸದಿಗಂತ ವರದಿ, ಬಾಗಲಕೋಟೆ:
ಕೆಂಪೇಗೌಡ ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಶುಕ್ರವಾರ ಕೂಡಲಸಂಗಮದಲ್ಲಿ ಮೃತ್ತಿಕೆಯನ್ನು ಸಚಿವರು ಪಡೆದುಕೊಂಡರು.
ಸಚಿವರಾದ ಅಶ್ವತ್ ನಾರಾಯಣ, ಆರ್.ಅಶೋಕ, ನಾರಾಯಣಗೌಡ, ಅರಗ ಜ್ಞಾನೇಂದ್ರ ಅವರು ಹೆಲಿಕ್ಯಾಪ್ಟರ ಮೂಲಕ ಸಂಗಮಕ್ಕೆ ಆಗಮಿಸಿದರು. ನಂತರ ಕೂಡಲಸಂಗಮನಾಥನ ದರ್ಶನ ಪಡೆದುಕೊಂಡು ಮೃತ್ತಿಕೆ ಸಂಗ್ರಹಿಸಿದರು.‌ ಬಳಿಕ ಬಸವಣ್ಣವರ ಐಕ್ಯಮಂಟಪಕ್ಕೆ ದರ್ಶನ ಪಡೆದುಕೊಂಡರು.
ಕೂಡಲಸಂಗಮ‌ ಬಸವಣ್ಣ ಐಕ್ಯವಾಗಿರುವ ಪುಣ್ಯ ಸ್ಥಳವಾಗಿದೆ. ಬಸವಣ್ಣನವರ ಕಾಯಕವೇ ಕೈಲಾಸ, ಸಮಾನತೆಯ ಸಮಾಜ, ದಾಸೋಹ ಇತ್ಯಾದಿ ಅವರ ಸಂದೇಶಗಳಿದ್ದು, ಬಸವಣ್ಣನವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬೆಂಗಳೂರ ಕಟ್ಟಿದ ನಾಡಪ್ರಭು ಕೆಂಪೇಗೌಡರು ಮೂರ್ತಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಮೃತ್ತಿಕೆ ಸಂಗ್ರಹಿಸಲು ಆಗಮಿಸಿರುವುದಾಗಿ ಹೇಳಿದರು.
ನಾಡನ್ನು ಒಂದು ಕಡೆಗೆ ತರಬೇಕು. ಶಕ್ತಿ ಸ್ಥಳ ಆಗಬೇಕು.ಜಗಜ್ಯೋತಿ ಬಸವೇಶ್ವರರ ಆಶೀರ್ವಾದ ಸದಾಕಾಲ ನಾಡಿನ ಜನರ ಮೇಲೆ ಇರಬೇಕು ಎಂದು ಈ ಕಾರಣಕ್ಕೆ ಇಲ್ಲಿನ ಮೃತ್ತಿಕೆ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!