ಡೇಟಿಂಗ್‌ಗೆ ರಶ್ಮಿಕಾ ಮಂದಣ್ಣ ಬೇಡವೆಂದ ತೆಲುಗು ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಯ್ಯ ಬಾಬು ಅನ್‌ಸ್ಟಾಪಬಲ್ ಎರಡನೇ ಸೀಸನ್ ಅದ್ಧೂರಿಯಾಗಿ ಮುಂದುವರೆಯುತ್ತಿದೆ. ಮೂರನೇ ಸಂಚಿಕೆಯಲ್ಲಿ ಯಂಗ್ ಹೀರೋಗಳಾದ ಶರ್ವಾನಂದ್ ಮತ್ತು ಅಡಿವಿ ಶೇಷು ಅನ್‌ಸ್ಟಾಪಬಲ್ ಶೋನಲ್ಲಿ ಮನರಂಜನೆ ಸುರಿಂಳೆ ಹರಿಸಿದರು. ಈ ಶೋನ ಭಾಗವಾಗಿ ಕೇಳಿದ ಪ್ರಶ್ನೆಗೆ ನಟ ಶರ್ವಾನಂದ್‌ ರಶ್ಮಿಕಾ ಡೇಟಿಂಗ್‌ಗೆ ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂಚಿಕೆಯಲ್ಲಿ ಬಾಲಯ್ಯ ಬಾಬು ನಾಯಕಿಯರ ಬಗ್ಗೆ ಮಾತನಾಡುತ್ತಾ ಡೇಟಿಂಗ್‌ ಹೋಗೋದಾದರೆ ಯಾವ ಹೀರೋಯಿನ್ ಸೆಲೆಕ್ಟ್ ಮಾಡ್ತೀರಿ ಅಂತ ಪ್ರಶ್ನೆ ಮಾಡಿದ್ದಾರೆ. ಇದರ ಭಾಗವಾಗಿ ಸಾಯಿ ಪಲ್ಲವಿ ಮತ್ತು ರಶ್ಮಿಕಾ ಇವರಲ್ಲಿ ನಿಮ್ಮ ಆಯ್ಕೆ ಯಾರು ಎಂದಾಕ್ಷಣ ಶರ್ವಾನಂದ್‌ ಕೂಡಲೇ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಿಕೊಂಡರು.

ಸಾಯಿ ಪಲ್ಲವಿ ದೇವಸ್ಥಾನಕ್ಕೆ ಹೋಗೋಣ ಎಂದ ಕೂಡಲೇ ಏನನ್ನೂ ಪ್ರಶ್ನಿಸದೆ ಬರುತ್ತಾರೆ. ಒಟ್ಟಿಗೇ ಅನೇಕ ದೇವಸ್ಥಾನಗಳಿಗೂ ಕೂಡಾ ಹೋಗಿದ್ದೇವೆ ಎಂದರು. ಅಡವಿ ಶೇಷು ಕೂಡಾ ಸಾಯಿ ಪಲ್ಲವಿ ಹೆಸರನ್ನೇ ಹೇಳಿದ್ದಾರೆ. ಸಾಯಿ ಪಲ್ಲವಿಗೆ ಒಳ್ಳೆಯ ಕವನ ಇಷ್ಟ. ಒಂದೊಳ್ಳೆ ಕವನ ಹೇಳಿದರೆ ಸಾಕು ಬರುತ್ತಾರೆ ಎಂಬ ಮಾತನ್ನು ಹೇಳಿದರು. ರಶ್ಮಿಕಾ ಮಂದಣ್ಣ, ಶರ್ವಾನಂದ್‌ ಇಬ್ಬರೂ ಒಟ್ಟಿಗೆ ʻಆಡವಾಳ್ಳು ಮೀಕು ಜೋಹಾರ್ಲುʼ ಎಂಬ ಸಿನಿಮಾದಲ್ಲಿ ನಟಿಸಿದ್ದರೂ ಕೂಡ ರಶ್ಮಿಕಾ ಹೆಸರನ್ನು ಆಯ್ಕೆ ಮಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!