HEALTH | ಇನ್ಸ್ಟಾಂಟ್ ನೂಡಲ್ಸ್ ಪ್ರಿಯರೇ ಇಲ್ಲಿ ನೋಡಿ.. ನೂಡಲ್ಸ್‌ನಿಂದ ಒತ್ತಡ ಜಾಸ್ತಿಯಂತೆ!

ಇನ್ಸ್ಟಾಂಟ್ ನೂಡಲ್ಸ್ ಯಾರಿಗಿಷ್ಟ ಇಲ್ಲ ಹೇಳಿ? ತಣ್ಣಗಿನ ವೆದರ್ ಬಿಸಿ ಬಿಸಿ ಕಾಫಿ ಜೊತೆ ಒಂದು ಕಪ್ ನೂಡಲ್ಸ್ ಇದ್ರೆ? ವ್ಹಾವ್ ಅದರ ಮಜವೇ ಬೇರೆ ಅಲ್ವಾ?

ಆದರೆ ಇನ್ಸ್ಟಾಂಟ್ ನೂಡಲ್ಸ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾ? ಒಳ್ಳೆಯ ಫುಡ್, ಕೆಟ್ಟ ಫುಡ್ ಅಂತ ಇರೋದಿಲ್ಲ, ಎಲ್ಲವೂ ಕ್ಯಾಲೊರಿ ಲೆಕ್ಕ ಎಂದು ನೀವು ಹೇಳಬಹುದು. ಆದರೆ ಮೈದಾ ನಿಮ್ಮ ಆರೋಗ್ಯವನ್ನು ಡ್ಯಾಮೇಜ್ ಮಾಡುತ್ತದೆ.

ನೂಡಲ್ಸ್‌ನಲ್ಲಿ ಫೈಬರ್ ಅಥವಾ ಪ್ರೋಟೀನ್ ಏನೂ ಇರೋದಿಲ್ಲ. ಹೊಟ್ಟೆ ತುಂಬುತ್ತದೆ ಆದರೆ ದೇಹಕ್ಕೆ ಉತ್ತಮವಾದ ಯಾವ ಅಂಶವೂ ಸಿಗೋದಿಲ್ಲ.

ಹೈ ಫ್ಯಾಟ್ ಹಾಗೂ ಕಾರ್ಬೋಹೈಡ್ರೇಟ್ಸ್ ಇರುವ ಕಾರಣ ನಿಮ್ಮ ತೂಕ ಏಕಾಏಕಿ ಹೆಚ್ಚಳವಾಗುತ್ತದೆ.

ಇನ್ನು ಸೋಡಿಯಂ ಅತಿಯಾಗಿ ಇರುವ ಕಾರಣ ಒತ್ತಡಕ್ಕೆ ಒಳಗಾಗುತ್ತೀರಿ. ಮೈದಾದಲ್ಲಿ ಮಾಡುವ ನೂಡಲ್ಸ್ ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆ ಎದುರಾಗುವಂತೆಯೂ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!