ಬರೋಬ್ಬರಿ 12ವರ್ಷಗಳ ಕಾಲ ವ್ಯಯಿಸಿ ನೆಲದಡಿಯಲ್ಲಿ 2ಅಂತಸ್ತಿನ ಅರಮನೆ ನಿರ್ಮಾಣ, ಇಲ್ಲಿ ಎಲ್ಲವೂ ಲಭ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನುಷ್ಯ ಮನಸ್ಸು ಮಾಡಿದರೆ ಪರ್ವತಗಳನ್ನೇ ಪುಡಿಮಾಡುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಬ್ರಹ್ಮಾಂಡದ ರಹಸ್ಯಗಳನ್ನು ಬಿಚ್ಚಿಡುತ್ತಾನೆ. ಅವನು ಬೆಟ್ಟಗಳನ್ನು ಪುಡಿಮಾಡುವುದು ಮಾತ್ರವಲ್ಲದೆ ಕೋಟೆಗಳನ್ನು ಕೂಡ ನಿರ್ಮಿಸಬಲ್ಲನು. ಅಯ್ಯೋ ಈಗಿನ ಅದೇನು ಮಹಾನ್‌ ಸಾಧನೆ ಅಂದುಕೊಂಡ್ರಾ? ಸಾಧನೆನೇ ಕಣ್ರೀ..ಯಾಕಂದ್ರೆ ಒಬ್ಬ ವ್ಯಕ್ತಿ ನೆಲದ ಅಡಿಯಲ್ಲಿ ಯಂತ್ರಗಳ ಸಹಾಯವಿಲ್ಲದೆ, ಕೈಯ್ಯಿಂದ ಎರಡು ಅಂತಸ್ತಿನ ಮನೆ ಕಟ್ಟುವುದಂದರೆ ಮಾತಲ್ಲ.

ಈ ಪವಾಡವನ್ನು ಸೃಷ್ಟಿಸಿದ ವ್ಯಕ್ತಿಯ ಹೆಸರು ಇರ್ಫಾನ್, ಉತ್ತರ ಪ್ರದೇಶದ ಹರ್ಧೋಯ್ ನಿವಾಸಿ. ಎಲ್ಲರೂ ಅವರನ್ನು ಪಪ್ಪು ಬಾಬಾ ಎಂದೇ ಕರೆಯುತ್ತಾರೆ. ನೆಲದ ಅಡಿಯಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣಕ್ಕೆ ಒಂದು ಗುದ್ದಲಿ ಬಿಟ್ಟು ಬೇರೇನೂ ಬಳಸಿಲ್ಲವಂತೆ. ಕೇವಲ ಕೈಯ್ಯಿಂದಲೇ 12 ವರ್ಷಗಳ ಕಾಲ ವ್ಯಯಿಸಿ ಅದ್ಭುತ ಮನೆಯನ್ನು ಕಟ್ಟಿದ್ದಾರೆ. 2011 ರಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ ಅವರು, ಈ ಎರಡು ಅಂತಸ್ತಿನ ಅರಮನೆಯಲ್ಲಿ 11 ಕೊಠಡಿಗಳು, ಮಸೀದಿ, ಗ್ಯಾಲರಿ ಮತ್ತು ಡ್ರಾಯಿಂಗ್ ರೂಮ್ ಅನ್ನೂ ಕಟ್ಟಿದ್ದಾರೆ.  ಪಪ್ಪು ಬಾಬಾ ಇವುಗಳನ್ನು ಪಕ್ಕಾ ವಾಸ್ತುವಿನೊಂದಿಗೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಈ ಅರಮನೆಯ ನಿರ್ಮಾಣದಲ್ಲಿ ಬಾವಿಯನ್ನೂ ನಿರ್ಮಿಸಿದ. ಈ ಬಾವಿಯ ನೀರನ್ನು ಕುಡಿಯಲು ಉಪಯುಕ್ತವಾಗುವಂತೆ ಮಾಡಿದರು. ಆದರೆ ಕೆಲವರು ಆ ಬಾವಿಯನ್ನು ಹಾಳು ಮಾಡಿದ್ದಾರೆ ಎಂದು ಪಪ್ಪುಬಾಬಾ ವಿಷಾದ ವ್ಯಕ್ತಪಡಿಸುತ್ತಾರೆ.

ಪಪ್ಪು ಬಾಬಾ ತನ್ನ ಕುಟುಂಬದ ಜೀವನಾಧಾರವೆಂದು ಪರಿಗಣಿಸಲಾದ ಕೃಷಿ ಭೂಮಿಯ ಮಣ್ಣಿನಿಂದ ಈ ಮನೆಯನ್ನು ನಿರ್ಮಿಸಿದ್ದಾನೆ. ಮೇಲ್ಭಾಗದಲ್ಲಿ ಬಂಕರ್ ನಂತೆ ಕಾಣುವ ಈ ಎರಡು ಅಂತಸ್ತಿನ ಕಟ್ಟಡ ಜನರನ್ನು ಆಕರ್ಷಿಸುತ್ತಿದೆ. ಇವರ ತಂದೆ ನಿಧನದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

ಮನೆ ಕಟ್ಟಲು ಶುರು ಮಾಡಿದ ನಂತರ ಊಟಕ್ಕೆ ಮಾತ್ರ ಮನೆಗೆ ಹೋಗುತ್ತಿದ್ದರಂತೆ, ಬರೀ ಕೆಸರಿನಿಂದ ಮನೆ ಕಟ್ಟಿದ್ದಕ್ಕೆ ಹಲವರು ಗೇಲಿ ಮಾಡುತ್ತಿದ್ದರೂ ತಲೆಕೆಡಿಸಿಕೊಳ್ಳದೆ 12 ವರ್ಷಗಳ ಕಠಿಣ ಪರಿಶ್ರಮದ ನಂತರ ಮಸೀದಿ, ಡ್ರಾಯಿಂಗ್ ರೂಂ, ಊಟದ ಕೋಣೆ, ಹಾಲ್ ಹೀಗೆ ಎಲ್ಲಾ ಸೌಲಭ್ಯಗಳಿರುವ ಕೋಣೆಗಳೊಂದಿಗೆ ಸುಂದರವಾದ ಮನೆಯನ್ನು ನಿರ್ಮಿಸಿದರು. ಪೂರ್ಣಗೊಂಡಿರುವ ಮನೆಯನ್ನು ನೋಡಿದ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇರ್ಫಾನ್ ಅವರನ್ನು ಹೊಗಳುತ್ತಿದ್ದಾರೆ. ಗೇಲಿ ಮಾಡುವವರು ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!