October 4, 2026
Sunday, October 4, 2026
spot_img

ಮಕ್ಕಳಿಗೆ ಶಾಲೆ ಹೇಗಿತ್ತು ಅಂತ ಕೇಳೋ ಬದಲು ಈ ಪ್ರಶ್ನೆಗಳನ್ನು ಕೇಳಿ, ಎಲ್ಲ ಉತ್ತರ ತಂತಾನೇ ಸಿಗುತ್ತದೆ

ನಿತ್ಯವೂ ಶಾಲೆಯಿಂದ ಬರುವ ಮಕ್ಕಳನ್ನು ಇವತ್ತು ಶಾಲೆಯಲ್ಲಿ ಏನೆಲ್ಲಾ ಆಯ್ತು? ಏನು ತಿಂದೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದಾಗ ಮಾಮೂಲಿ ಎಂದಷ್ಟೇ ಮಕ್ಕಳು ಹೇಳ್ತಾರೆ. ನೀವು ಒಕೆ ಎಂದು ಮುಂದುವರಿಯುತ್ತೀರಿ. ಆದರೆ ಶಾಲೆಯಲ್ಲಿ ಆದ ಎಷ್ಟೋ ವಿಷಯಗಳನ್ನು ಮಕ್ಕಳು ಹೇಳದೇ ಇರಬಹುದು. ಸ್ನೇಹಿತರ ಜೊತೆ ಜಗಳ, ಟೀಚರ್‌ ಹೊಡೆದಿದ್ದು, ಕಡಿಮೆ ಮಾರ್ಕ್ಸ್‌ ಬಂದದ್ದು, ಸ್ನೇಹಿತರ ದೂರ ಇಟ್ಟಿರುವುದು ಇನ್ನಿತರ ಸೂಕ್ಷ್ಮ ವಿಷಯಗಳು ನಿಮಗೆ ತಿಳಿಯಬೇಕು ಎಂದರೆ ಕೇಳುವ ರೀತಿಯಲ್ಲಿ ಪ್ರಶ್ನೆಯನ್ನು ಕೇಳಬೇಕು. ಅದಕ್ಕೂ ಮುನ್ನ ಮಕ್ಕಳು ನಿಮ್ಮ ಜೊತೆ ಏನನ್ನಾದ್ರೂ ಹೇಳುವಂತ ವಾತಾವರಣ ಮನೆಯಲ್ಲಿ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಯಾವ ರೀತಿ ಪ್ರಶ್ನೆ ಮಾಡಬೇಕು ಗೊತ್ತಿಲ್ಲ ಅನ್ನೋದಾದ್ರೆ, ನಿತ್ಯವೂ ಇವತ್ತು ಸ್ಕೂಲ್‌ ಹೇಗಿತ್ತು ಎಂದು ಒಂದೇ ಪ್ರಶ್ನೆ ಕೇಳುವ ಬದಲು, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಬೇರೆ ಬೇರೆ ಪ್ರಶ್ನೆಗಳನ್ನು ಕೇಳುತ್ತಾ ಹೋಗಿ. ಒಟ್ಟಾರೆ ದಿನದಲ್ಲಿ ಏನಾಯ್ತು, ಮಕ್ಕಳ ಜೀವನದಲ್ಲಿ ಏನಾಗ್ತಿದೆ ಅನ್ನೋದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.ಹೇಗೆ ಅನ್ನೋದಕ್ಕೆ ಈ ಆರ್ಟಿಕಲ್‌ ಸಂಪೂರ್ಣ ಓದಿ..

ಊಟ ಖಾಲಿ ಮಾಡಿದ್ಯಾ ಎಂದು ಕೇಳುವ ಬದಲು ಇಂದು ಯಾರ ಪಕ್ಕ ಕೂತು ಊಟ ಮಾಡಿದೆ, ಸ್ನೇಹಿತರ ಮನೆಯಲ್ಲಿ ಯಾವೆಲ್ಲಾ ಅಡುಗೆ ಮಾಡಿದ್ರು ಎಂದು ಕೇಳಿ.

ಬ್ರೇಕ್‌ ಸಮಯದಲ್ಲಿ ಏನು ಮಾಡಿದ್ರಿ? ಯಾವೆಲ್ಲಾ ಆಟ ಆಡ್ತೀರಿ

ಇಂದು ಶಾಲೆಯಲ್ಲಿ ಜೋರಾಗಿ ನಗುವಂತಹ ವಿಷಯ ಏನಾದ್ರೂ ಆಯ್ತಾ?

ಇಂದು ಯಾರ ಜೊತೆ ಹೆಚ್ಚು ಸಮಯ ಕಳೆದೆ?

ಇಂದು ಶಾಲೆಯಲ್ಲಿ ಕಲಿತ ಹೊಸ ಪಾಠ ಯಾವುದು?

ಇಂದು ಆದ ಯಾವುದೇ ಸಂದರ್ಭದ ಬಗ್ಗೆ ಯಾವುದಾದರೂ ಡೌಟ್‌ ಇದೆಯಾ?

ಇಂದು ಯಾರಿಗಾದ್ರೂ ಸಹಾಯ ಮಾಡಿದ್ಯಾ? ಅಥವಾ ಯಾರಿಂದಲಾದ್ರೂ ಸಹಾಯ ಪಡೆದೆಯಾ?

ಮುಂದೆ ನೀನು ಟೀಚರ್‌ ಆದ್ರೆ ಯಾವ ಟೀಚರ್‌ ರೀತಿ ನಡ್ಕೋತಿಯಾ?

ಏಲಿಯನ್ಸ್‌ ಅಥವಾ ಝಾಂಬಿ ನಿಮ್ಮ ಶಾಲೆಗೆ ಬಂದು ಮೂರು ಮಕ್ಕಳನ್ನು ಕರೆದುಕೊಂಡು ಹೋಗ್ತೀವಿ ಅಂದ್ರೆ ಯಾರ ಹೆಸರು ಹೇಳ್ತೀಯಾ?

ಇವತ್ತು ಯಾರಾದ್ರೂ ನಿಂಗೆ ಸಿಟ್ಟು ಬರಿಸಿದ್ರಾ?

ನಾಳೆ ನಿನ್ನನ್ನು ಬೇರೆ ಶಾಲೆಗೆ ಸೇರಿಸ್ತೀವಿ ಅಂದ್ರೆ ಯಾರನ್ನು ತುಂಬಾ ಮಿಸ್‌ ಮಾಡ್ಕೋತ್ಯ?

ಶಾಲೆಯ ಯಾವ ರೂಲ್ಸ್‌ ಫಾಲೋ ಮಾಡೋದಕ್ಕೆ ಕಷ್ಟವಾಗುತ್ತದೆ?

ಇದೇ ರೀತಿಯ ಸವಾಲುಗಳನ್ನು ದಿನದ ಬೇರೆ ಬೇರೆ ಸಮಯದಲ್ಲಿ ಕೇಳಿ. ಮಕ್ಕಳ ಸ್ನೇಹಿತರು ಯಾರು, ಯಾರನ್ನು ಕಂಡ್ರೆ ಇಷ್ಟ ಇಲ್ಲ. ಶಾಲೆಯಲ್ಲಿ ಯಾವ ಟೀಚರ್ ಹೇಗೆ ಇರ್ತಾರೆ ಪ್ರತಿಯೊಂದು ಮಾಹಿತಿಯೂ ನಿಮ್ಮಲ್ಲಿರುತ್ತದೆ. ಹಾಗೆ ಅವರ ಉತ್ತರಗಳಿಗೆ ನೆಗೆಟಿವ್‌ ಆಗಿ ರಿಯಾಕ್ಟ್‌ ಮಾಡಬೇಡಿ. ಇದರಿಂದ ಮಕ್ಕಳು ನಿಮ್ಮ ಮುಂದಿನ ಪ್ರಶ್ನೆಗಳಿಗೆ ಉತ್ತರಿಸೋಕೆ ಹೆದರುತ್ತಾರೆ.

Must Read