September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 3 | ಅದು ಇದು ತಿನ್ನೋ ಬದಲು ಬೆಳಗ್ಗೆ ಒಂದು ದೊಡ್ಡ ಗೋಧಿ ಮುದ್ದೆ ತಿನ್ಕೊಂಡು ಹೋಗಿ, ಬೇಗ ಹಸಿವಾಗೋದಿಲ್ಲ

ಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಉಪ್ಪು
ತುಪ್ಪ
ನೀರು

ಮಾಡುವ ವಿಧಾನ
ಮೊದಲು ಬಾಣಲೆಗೆ ಒಂದು ಲೋಟ ನೀರು ಹಾಕಿ, ಜೊತೆಗೆ ಚಿಟಿಕೆ ಉಪ್ಪು ಹಾಕಿ
ಇದಕ್ಕೆ ಒಂದರಿಂದ ಎರಡು ಸ್ಪೂನ್‌ ರವೆ ಹಾಕಿ, ಉಳಿದ ಅನ್ನ ಇದ್ರೂ ಹಾಕಬಹುದು
ಆನಂತರ ಒಂದು ಸ್ಪೂನ್‌ ಗೋಧಿಹಿಟ್ಟು ಹಾಕಿ ಕದಡಿ
ಇದನ್ನು ಐದು ನಿಮಿಷ ಹಾಗೇ ಬಿಡಿ. ಒಮ್ಮೆ ಎಲ್ಲವೂ ಬಿಸಿಯಾಗಿ ಕೂಡಿಕೊಂಡ ನಂತರ ಅರ್ಧ ಕಪ್‌ನಷ್ಟು ಗೋಧಿಹಿಟ್ಟನ್ನು ಹಾಕಿ
ಸಣ್ಣ ಉರಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ
ನಂತರ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಗಂಟಾಗದಂತೆ ಕೈಯನ್ನು ಸ್ಪೀಡ್‌ ಆಗಿ ತಿರುಗಿಸಿ
ನಂತರ ತುಪ್ಪ ಹಾಕಿಕೊಂಡು ಉಂಡೆ ಕಟ್ಟಿದ್ರೆ ಮುದ್ದೆ ರೆಡಿ, ನಿಮ್ಮಿಷ್ಟದ ಸಾಂಬಾರ್‌ ಜೊತೆ ಮುದ್ದೆ ಊಟ ಮಾಡಿ

Must Read