Sunday, February 5, 2023

Latest Posts

ಸಂವಿಧಾನ-ಗಣರಾಜ್ಯೋತ್ಸವಕ್ಕೆ ಅಪಮಾನ: ನಟಿ ರಚಿತಾ ರಾಮ್ ಗಡೀಪಾರಿಗೆ ಆಗ್ರಹ!

ಹೊಸದಿಗಂತ ವರದಿ,ಮದ್ದೂರು :

ಸಂವಿಧಾನ ಮತ್ತು ಗಣರಾಜ್ಯೋತ್ಸವ ಆಚರಣೆಗೆ ಅಪಮಾನ ಮಾಡಿರುವ ಚಿತ್ರನಟಿ ರಚಿತಾರಾಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮದ್ದೂರು ಪೊಲೀಸರಿಗೆ ದೂರು ನೀಡಿದೆ.
ಕ್ರಾಂತಿ ಸಿನಿಮಾದ ಕಾರ‌್ಯಕ್ರಮವೊಂದರಲ್ಲಿ ನಟಿ ರಚಿತಾರಾಮ್ ಪ್ರತೀ ವರ್ಷ ಜ. 26ರಂದು ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಬಾರಿ ಕ್ರಾಂತಿ ವಿಜಯೋತ್ಸವ ಮಾಡಿ ಎಂದು ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡಿರುವುದು ಸಂವಿಧಾನ ವಿರೋಧಿ ಹಾಗೂ ದೇಶದ್ರೋಹವಾಗಿದೆ ಎಂದು ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ರಚಿತಾರಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿ ಅವರನ್ನು ಈ ದೇಶದಿಂದ ಗಡೀಪಾರು ಮಾಡಬೇಕು. ಈ ಬಗ್ಗೆ ಆಕೆ ಮಾತನಾಡಿರುವ ವೀಡಿಯೋ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ನಟಿ ರಚಿತಾರಾಮ್ ವಿರುದ್ಧ ಜಿಎಸ್‌ಸಿ ಅನ್ವಯ ಪ್ರಕರಣ ದಾಖಲು ಮಾಡಿ ಸ್ವೀಕೃತಿ ಪತ್ರ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!