ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಸದನದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಮಾಡಿದ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋನಿಯಾ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದು, ಇದು ಆದಿವಾಸಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ.
ಮುರ್ಮು ಬಗ್ಗೆ ಸೋನಿಯಾ ಗಾಂಧಿಯವರ “ಕಳಪೆ” ಹೇಳಿಕೆಯನ್ನು ಖಂಡಿಸಿದ ಮೋದಿ, ಕಾಂಗ್ರೆಸ್ ದೇಶಾದ್ಯಂತ 10 ಕೋಟಿ ಆದಿವಾಸಿಗಳನ್ನು ಅವಮಾನಿಸಿದೆ ಎಂದು ಹೇಳಿದ್ದಾರೆ.
ದ್ರೌಪದಿ ಮುರ್ಮು ಜಿ ಬುಡಕಟ್ಟು ಕುಟುಂಬದಿಂದ ಬಂದಿದ್ದಾಳೆ. ಆಕೆಯ ಮಾತೃಭಾಷೆ ಹಿಂದಿಯಲ್ಲ, ಅದು ಒಡಿಯಾ. ಅವರು ಇಂದು ಸಂಸತ್ತಿಗೆ ಅದ್ಭುತ ರೀತಿಯಲ್ಲಿ ಸ್ಫೂರ್ತಿ ನೀಡಿದರು, ಭಾಷಣ ಮಾಡಿದರು. ಆದರೆ ಕಾಂಗ್ರೆಸ್‌ನ ರಾಜಮನೆತನವು ಆಕೆಯನ್ನು ಅವಮಾನಿಸಲು ಪ್ರಾರಂಭಿಸಿದೆ ಎಂದು ದೆಹಲಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಬುಡಕಟ್ಟು ಮಗಳು ನೀರಸ ಭಾಷಣ ಮಾಡಿದ್ದಾಳೆ ಎಂದು ರಾಜಮನೆತನದ ಸದಸ್ಯರೊಬ್ಬರು ಹೇಳಿದರು. ಮತ್ತೊಬ್ಬ ಸದಸ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಧ್ಯಕ್ಷರನ್ನು ಕಳಪೆ ಎಂದು ಕರೆದರು. ಬುಡಕಟ್ಟು ಜನಾಂಗದ ಮಗಳ ಮಾತು ಅವರಿಗೆ ಬೇಸರ ತರಿಸುತ್ತದೆ. ಇದು ದೇಶದ 10 ಕೋಟಿ ಬುಡಕಟ್ಟು ಸಹೋದರ- ಸಹೋದರಿಯರಿಗೆ ಮಾಡಿದ ಅವಮಾನವಾಗಿದೆ ಎಂದು ಮೋದಿ ಟೀಕಿಸಿದರು.
ಸೋನಿಯಾ ಗಾಂಧಿ ಹೇಳಿದ್ದೇನು?
ರಾಷ್ಟ್ರಪತಿ ಭಾಷಣದ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ಮಾಧ್ಯಮಗಳು ಪ್ರತಿಕ್ರಿಯೆ ಹೇಳಿದಾಗ, ಕಳಪೆಯಾಗಿತ್ತು (Poor Thing). ಆಕೆ ಭಾಷಣದ ಕೊನೆಯಲ್ಲಿ ದಣಿದಂತೆ ಕಾಣುತ್ತಿದ್ದರು. ಭಾಷಣ ತುಂಬಾ ಬೋರಿಂಗ್ ಆಗಿತ್ತು, ಪದೇ ಪದೇ ಒಂದೇ ವಿಷಯವನ್ನು ಹೇಳುತ್ತಿದ್ದರು ಎಂದು ಟೀಕಿಸಿದ್ದರು. ಸೋನಿಯಾ ಗಾಂಧಿ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರ