ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ರಾಖಿ ಸಾವಂತ್ ಮೂರನೇ ಮದುವೆ ಘೋಷಣೆ ಮಾಡಿದ್ದು, ಪಾಕಿಸ್ತಾನದ ಮಾಡೆಲ್ ಡೊಡಿ ಖಾನ್ ಜೊತೆ ವಿವಾಹ ಆಗುವುದಾಗಿ ಘೋಷಿಸಿದ್ದರು. ಆದರೆ, ಈ ವಿಚಾರವನ್ನು ಡೊಡಿ ಖಾನ್ ತಳ್ಳಿ ಹಾಕಿದ್ದಾರೆ. ಅವರೇ ಪ್ರಪೋಸ್ ಮಾಡಿ ಉಲ್ಟಾ ಹೊಡೆದಿದ್ದಾರೆ.
ರಾಖಿ ಅವರಿಗೆ ಎರಡು ಮದುವೆ ಆಗಿ ಮುರಿದು ಬಿದ್ದಿವೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ವಿವಾಹ ಆದರು. 2022ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಮೈಸೂರು ಮೂಲದ ಆದಿಲ್ ಖಾನ್ ಜೊತೆ ಮದುವೆ ನೆರವೇರಿತು.ಇತ್ತೀಚೆಗೆ ಅವರು ಮೂರನೇ ಮದುವೆ ಘೋಷಣೆ ಮಾಡಿದ್ದರು. ಪಾಕ್ ಹುಡುಗನ ಜೊತೆ ಮದುವೆ ಆಗ್ತೀನಿ ಎಂದಿದ್ದರು ಅವರು.
‘ಹೆಲ್ಲೋ ಭಾರತ ಹಾಗೂ ಪಾಕಿಸ್ತಾನ. ನಾನು ಡೊಡಿ ಖಾನ್ ಮಾತನಾಡುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ನೋಡಿದ್ದೀರಿ. ರಾಖಿ ಸಾವಂತ್ ಅವರಿಗೆ ನಾನು ಪ್ರಪೋಸ್ ಮಾಡಿದ್ದೆ. ಅವರನ್ನು ನಾನು ಚೆನ್ನಾಗಿ ತಿಳಿದಿದ್ದೇನೆ. ಹೀಗಾಗಿ ಪ್ರಪೋಸ್ ಮಾಡಿದೆ. ಅವರನ್ನು ತಿಳಿಯುತ್ತಾ ಹೋದಂತೆ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ ಎಂದು ಗೊತ್ತಾಯಿತು’ ಎಂದಿದ್ದಾರೆ ಡೊಡಿ ಖಾನ್.
‘ರಾಖಿ ಸಾವಂತ್ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಓರ್ವ ಅವರ ಜೀವನದಲ್ಲಿ ಬಂದ. ಅವರಿಗೆ ಆತ ಏನು ಮಾಡಿದ ಅನ್ನೋದು ನಿಮಗೆ ಗೊತ್ತು. ಅವರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಅವರು ಇಸ್ಲಾಮ್ನ ಒಪ್ಪಿಕೊಂಡಿದ್ದಾರೆ. ಅವರು ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಇದೆಲ್ಲ ಇಷ್ಟ ಆಗಿ ನಾನು ಅವರಿಗೆ ಪ್ರಪೋಸ್ ಮಾಡಿದೆ’ ಎಂದು ಡೊಡಿ ಖಾನ್ ಹೇಳಿದ್ದಾರೆ.
ಆದರೆ, ಇದು ಜನರಿಗೆ ಸ್ವೀಕಾರಾರ್ಹವಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಈಗಾಗಲೇ ಸಾಕಷ್ಟು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ರಾಖಿ ಅವರೇ ನೀವು ನನ್ನ ಉತ್ತಮ ಸ್ನೇಹಿತೆ. ಯಾವಾಗಲೂ ನಿಮ್ಮ ಜೊತೆ ಇರುತ್ತೇನೆ. ನೀವು ನನ್ನ ಪತ್ನಿ ಆಗಲು ಸಾಧ್ಯವಾಗದಿರಬಹುದು. ಆದರೆ, ನೀವು ಪಾಕಿಸ್ತಾನದ ಸೊಸೆಯಾಗುತ್ತೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ನಿಮ್ಮನ್ನು ಪಾಕಿಸ್ತಾನದವರ ಜೊತೆ ಮದುವೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.