ನಾರಿಶಕ್ತಿಗೆ ಅಪಮಾನ: ಶಾಮನೂರು ವಿರುದ್ಧ ಕಿಡಿಕಾರಿದ ಬ್ಯಾಡ್ಮಿಂಟನ್ ತಾರೆ ಸೈನ್ ನೆಹ್ವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಾವಣಗೆರೆಯಿಂದ (Davanagere) ಗೆದ್ದು ಮೋದಿಗೆ ಕಮಲ ಅರ್ಪಿಸುತ್ತೇನೆ ಅಂತಾರೆ. ಮೊದಲು ಜಿಲ್ಲೆಯ ಸಮಸ್ಯೆ ಬಗ್ಗೆ ತಿಳಿಯಲಿ. ‘ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ದಾವಣಗೆರೆ ಬಿಜೆಪಿ (BJP) ಅಭ್ಯರ್ಥಿ ಗಾಯತ್ರಿ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಈ ಕುರಿತಾಗಿ ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.

ಇದೀಗ ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಸೈನಾ ನೆಹ್ವಾಲ್, “ಮಹಿಳೆಯನ್ನು ಅಡುಗೆ ಕೋಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಕರ್ನಾಟಕದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರು ಹೇಳಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ಮೇಲಿನ ಈ ಸೆಕ್ಸಿಸ್ಟ್ ಹೇಳಿಕೆ ಬಗ್ಗೆ ಪಕ್ಷವೂ ಲಡ್ಕಿ ಹೂಂ ಲಡ್‌ ಸಕ್ತಿ ಹೂಂ(ನಾನು ಹುಡುಗಿಯಿರಬಹುದು, ಆದ್ರೆ ಹೋರಾಡುತ್ತೇನೆ) ಎನ್ನುವ ಕನಿಷ್ಠ ಬೆಂಬಲವನ್ನಾದರೂ ನೀಡಬೇಕು ಎನ್ನುವ ನಿರೀಕ್ಷಿಸುತ್ತೇನೆ.

ನಾನು ದೇಶಕ್ಕಾಗಿ ಹೋರಾಡಿ ಪದಕ ಗೆದ್ದಾಗ, ನಾನು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು?. ಮತ್ತೆ ಯಾಕಾಗಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ತಾವು ಬಯಸಿದ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಕನಸು ಕಾಣಿರಿ ಎಂದು ಹೇಳಬೇಕು. ಒಂದು ಕಡೆ ನಾವು ನಾರಿ ಶಕ್ತಿಗೆ ನಮನ ಸಲ್ಲಿಸುತ್ತೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಪಾಸ್ ಮಾಡಲಾಗಿದೆ. ಮತ್ತೊಂದೆಡೆ ಈ ನಾರಿಶಕ್ತಿಗೆ ಅವಮಾನ ಮಾಡುವ ಕೆಲಸ ಆಗುತ್ತಿದೆ. ನಮ್ಮ ನಡುವೆ ಎಂತಹ ಜನರಿದ್ದಾರೆ ಎಂದು ಸೈನಾ ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!