ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ ಬರೋಬ್ಬರಿ 238 ಬಾರಿ ಸೋತ ಅನುಭವದೊಂದಿಗೆ ಪದ್ಮರಾಜನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 238 ಬಾರಿ ಸೋಲು ಕಂಡೂ ‘ಸೋಲನ್ನು’ ಒಪ್ಪದ ಪದ್ಮರಾಜನ್ ಈ ಬಾರಿ ಮತ್ತೆ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ!

ಯಾರಿದು ಇಂಥಾ ಛಲಗಾರ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ಓದಿ ಅವರ ಡೀಟೇಲ್ಸ್….

ಇವರ ಹೆಸರು ಕೆ. ಪದ್ಮರಾಜನ್. ಹುಟ್ಟೂರು ತಮಿಳುನಾಡಿನ ಮೆಟ್ಟೂರು. ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆ ತನಕ ಸ್ಪರ್ಧಿಸಿದ ಅನುಭವ ಇವರದ್ದು. ಅಷ್ಟೇ ಯಾಕೆ, ಪದ್ಮರಾಜನ್ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧವೂ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

1988ನೇ ಇಸವಿಯಲ್ಲಿ ತಮ್ಮ ಹಟ್ಟೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದಿದ್ದ ಇವರು, ಬಳಿಕ ಪ್ರತೀ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ವೃತ್ತಿಯಲ್ಲಿ ಪದ್ಮರಾಜನ್ ಟೈರ್ ಅಂಗಡಿ ಮಾಲಿಕ.

ಚುನಾವಣೆಯಲ್ಲಿ ಗೆಲುವೇ ಮುಖ್ಯವಲ್ಲ. ನಾನು ಸ್ಪರ್ಧಿಸುವುದರಲ್ಲೇ ಗೆಲುವು ಕಾಣುತ್ತಿದ್ದೇನೆ. ಸತತ ಸೋಲಿನ ಬಳಿಕವೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲುತ್ತಿರುವುದನ್ನು ಜನ ಗೇಲಿ ಮಾಡುತ್ತಾರೆ. ಆದರೆ ನಾನು ಅದಕ್ಕೆಲ್ಲ ಕೇರ್ ಮಾಡಲ್ಲ ಎನ್ನುತ್ತಾರೆ ಈ ಗೆಲುವಿಲ್ಲದ ಸರದಾರ!
ಸುಮಾರು 65 ವರ್ಷದ ಈ ಅಭ್ಯರ್ಥಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಮುಂದಾಗುತ್ತಿದ್ದಾರೆ. ಇದುವರೆಗಿನ 238 ಬಾರಿಯ ಸ್ಪರ್ಧೆಯಲ್ಲಿ ಇವರು ಪಡೆದ ಅತ್ಯಧಿಕ ಮತ ಎಂದರೆ ಅದು 2011ರ ಚುನಾವಣೆಯಲ್ಲಿನ 6273 ಮತಗಳು. ಅಂದಹಾಗೆ ಯಾವ ಚುನಾವಣೆಯಲ್ಲೂ ಇವರು ಪ್ರಚಾರ ಮಾಡಿಲ್ಲ ಎಂಬುದು ವಿಶೇಷ. ಇನ್ನೂ ಒಂದು ವಿಶೇಷ ಎಂದರೆ ಪ್ರತೀ ಚುನಾವಣೆಯಲ್ಲೂ ಅವರು ಆರು ಸಾವಿರಕ್ಕೂ ಅಧಿಕ ಮತ ಪಡೆಯುತ್ತಿರುವುದು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!