Monday, March 27, 2023

Latest Posts

ಸಂಸತ್ತನ್ನು ಅವಮಾನಿಸಿದ್ದಕ್ಕೆ ರಾಹುಲ್ ಕ್ಷಮೆ ಕೇಳಲಿ- ಕಲಾಪದಲ್ಲಿ ಬಿಜೆಪಿ ಪಟ್ಟು

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಜೆಟ್‌ನ ಎರಡನೇ ಹಂತದ ಸಭೆ ಇಂದು ಆರಂಭವಾಗುತ್ತಿದ್ದಂತೆ, ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಲಂಡನ್‌ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸರ್ಕಾರ ವಾಗ್ದಾಳಿ ನಡೆಸಿದೆ.

ʻದೇಶ ಮತ್ತು ಪ್ರಜಾಪ್ರಭುತ್ವವನ್ನು ಅವಮಾನಿಸಿರುವ ಕಾಂಗ್ರೆಸ್ ನಾಯಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಸದನದ ಎಲ್ಲಾ ಸದಸ್ಯರು ಹೇಳಿಕೆಯನ್ನು ಖಂಡಿಸಿ ಜೊತೆಗೆ ರಾಹುಲ್ ಗಾಂಧಿ ಅವರು ಸದನದ ಮುಂದೆ ಕ್ಷಮೆಯಾಚಿಸಬೇಕುʼ ಎಂದು ಒತ್ತಾಯಿಸಿದರು.

ಇಂಗ್ರೆಂಡ್‌ ಸಂಸತ್ತಿನ ವೆಸ್ಟ್‌ಮಿಂಸ್ಟರ್‌ ಪ್ಯಾಲೇಸ್‌ನಲ್ಲಿರುವ ಗ್ರ್ಯಾಂಡ್‌ ಕಮಿಟಿ ರೂಮ್‌ನಲ್ಲಿ ರಾಗಾ ಮಾತನಾಡಿ, `ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಮೈಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಸರಿಯಾದ ಸ್ಥಿತಿಯಲ್ಲಿದ್ದರೂ, ಅವುಗಳನ್ನು ಸ್ವಿಚ್ ಆನ್ ಮಾಡುವುದ ಕಷ್ಟ. ತಾನು ಮಾತನಾಡುವಾಗ ಅನೇಕ ಬಾರಿ ಅನುಭವವಾಗಿದೆ ಎಂದರು. ಭಾರತದ ಪ್ರಜಾಸತ್ತಾತ್ಮಕ ರಚನೆಯ ಮೇಲೆ ಉಗ್ರ ದಾಳಿ ನಡೆಯುತ್ತಿದೆ. ದೇಶದ ವ್ಯವಸ್ಥೆಗಳು ಪೂರ್ಣ ಪ್ರಮಾಣದ ದಾಳಿಗೆ ಒಳಗಾಗಿವೆʼ ಎಂಬ ಕಾಮೆಂಟ್‌ಗಳು ಕಿಡಿ ಹಚ್ಚಿಸಿವೆ.

ನಿನ್ನೆ ಧಾರವಾಡದಲ್ಲೂ ರಾಹುಲ್‌ ಗಾಂಧಿ ಮಾತಿಗೆ ತಿರುಗೇಟು ಕೊಟ್ಟ ಪ್ರಧಾನಿ ʻಈ ಜಗತ್ತಿನ ಯಾವ ಶಕ್ತಿಯೂ ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಭಾರತದ ಪ್ರಜಾಪ್ರಭುತ್ವದ ರಚನೆಗಳು ʻಕ್ರೂರ ದಾಳಿʼಗೆ ಒಳಗಾಗಿವೆ ಎಂದು ಲಂಡನ್‌ನಲ್ಲಿ ರಾಗಾ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಅವರು, ಇದು 12 ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರಿಗೆ, ಕರ್ನಾಟಕದ ಜನರಿಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳಿಗೆ ಮತ್ತು ಅದರ ನಾಗರಿಕರಿಗೆ ಮಾಡಿದ ಅವಮಾನʼ ಎಂದು ಬಣ್ಣಿಸಿದ್ದರು.

ಸಂಸತ್‌ನಲ್ಲಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ ಬಿಜೆಪಿ-ಕಾಂಗ್ರೆಸ್‌ ನಾಯಕರ ನಡುವೆ ವಾದ-ವಿವಾದ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಸಭಾಪತಿಗಳು ಉಭಯ ಸದನಗಳನ್ನು ಮುಂದೂಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!