ಅಂತರ ಜಿಲ್ಲಾ ಖದೀಮರ ಬಂಧನ: ಎಂಟು ಲಕ್ಷ ರೂ. ಮೌಲ್ಯದ ವಾಹನಗಳ ವಶ

 ಹೊಸ ದಿಗಂತ ವರದಿ, ಮಳವಳ್ಳಿ:

ಇಬ್ಬರು ಅಂತರ ಜಿಲ್ಲಾ ಖದೀಮರನ್ನು ಬಂಧಿಸಿರುವ ಪೊಲೀಸರು ಅವರಿಂದ ಎಂಟು ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ನಿವಾಸಿಗಳಾದ ಅರುಣ(29) ಮತ್ತು ಗುರುಪ್ರಸಾದ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಆಟೋ ಚಾಲಕರಾದ ಇಬ್ಬರು ಬೇರೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು.
ಆರೋಪಿಗಳು ಮೈಸೂರು ನಗರ, ಮದ್ದೂರು, ಕೊಳ್ಳೇಗಾಲದಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದರು. ಇವರಿಂದ ಕಳವು ಮಾಲು ಖರೀದಿಸಿದ್ದ ಪಟ್ಟಣದ ನಿವಾಸಿಗಳಾದ ನಹೀಮ್ತಾಜ್ ಅಜರ್ ಪಾಷ ಮತ್ತು ಮನು ಅಲಿಯಾಸ್ ಕಳ್ಳಮನು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪಟ್ಟಣದ ಪೋಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಆರೋಪಿಗಳಾದ ಅರುಣ ಮತ್ತು ಗುರುಪ್ರಸಾದ್ ಮೈಸೂರು ನಗರ ಸೇರಿದಂತೆ ವಿವಿಧೆಡೆ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ ಮೈಸೂರು ನಗರದಿಂದ ಕಳವು ಮಾಡಿದ್ದ 8 ಪ್ಯಾಸೆಂಜರ್ ಆಟೋ ರಿಕ್ಷಾ, ಒಂದು ಆಪೇ ಗೂಡ್ಸ್ ಆಟೋ, 4 ದ್ವಿಚಕ್ರ ವಾಹನಗಳು, ಮದ್ದೂರು ಪಟ್ಟಣದ ಒಂದು ದ್ವಿಚಕ್ರ ವಾಹನ, ಕೊಳ್ಳೇಗಾಲ ಪಟ್ಟಣದ ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!