ಬ್ಯಾಗ್ ಕಳೆದುಕೊಂಡಿದ್ದ ಪ್ರವಾಸಿಗರಿಗೆ ಹಿಂದಿರುಗಿಸಿದ ಗೃಹರಕ್ಷಕ ಸಿಬ್ಬಂದಿಗಳು

ಹೊಸ ದಿಗಂತ ವರದಿ, ವಿಜಯನಗರ:

ವಿಶ್ವ ಪ್ರಸಿದ್ಧ ಹಂಪಿ ವೀಕ್ಷಣೆಗೆ ಆಗಮಿಸಿದ್ದ, ಫ್ರಾನ್ಸ್ ಮೂಲದ ಮಹಿಳೆ ಕಳೆದುಕೊಂಡಿದ್ದ ಬ್ಯಾಗನ್ನು ಪತ್ತೆ ಹಚ್ಚಿಕೊಡುವಲ್ಲಿ ಗೃಹರಕ್ಷಕ ಸಿಬ್ಬಂದಿಗಳು ಬುಧವಾರ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಂಪಿ ವೀಕ್ಷಣೆಗೆ ಆಗಮಿಸಿದ್ದ ಫ್ರಾನ್ಸ್ ಮೂಲದ ಮೇರಿ ಎನ್ನುವ ಮಹಿಳೆಯೋಬ್ಬರು, ಕ್ಷೇತ್ರದ ಅಧಿಪತಿ ಶ್ರೀ ವಿರುಪಾಕ್ಷೇಶ್ವರ ದರ್ಶನಕ್ಕೆ ತೆರಳಿದ್ದಾರೆ. ದೇಗುಲ ಪ್ರಾಂಗಣದಲ್ಲಿ ಮೇರಿ ಅವರ ಕೈಯಲ್ಲಿದ್ದ ಬ್ಯಾಗ್ ವೊಂದನ್ನು ಕೋತಿ ಮರಿಗಳು ಕಸಿದು ಪರಾರಿಯಾಗಿದ್ದವು. ಬ್ಯಾಗ್ ನಲ್ಲಿ ವೀಸಾ ಸೇರಿದಂತೆ ಇನ್ನಿತರ ಮಹತ್ವದ ದಾಖಲೆಗಳಿದ್ದವು ಎಂದು ಮೇರಿ ಪರದಾಡಿದರು. ಈ ವೇಳೆ ಸ್ಥಳದಲ್ಲಿದ್ದ ರಾಮಾನಾಯ್ಕ್, ವಿಶ್ವನಾಥ್ ಹಾಗೂ ಭಾಷಾ ಎನ್ನುವ ಮೂವರು ಗೃಹರಕ್ಷಕ ದಳ ಸಿಬ್ಬಂದಿಗಳು ನೆರವಿಗೆ ದಾವಿಸಿದ್ದಾರೆ. ಸಮಸ್ಯೆ ಅರಿತ ಮೂವರು ಸಿಬ್ಬಂದಿಗಳು ಕೋತಿಗಳು ತೆಗೆದುಕೊಂಡು ಹೋಗಿದ್ದ ಬ್ಯಾಗ್ ನ್ನು ಪತ್ತೆ ಹಚ್ಚಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವಾಸಿಗರಾದ ಮೇರಿ ಅವರು‌ ಬ್ಯಾಗ್ ದೊರೆಯುತ್ತಿದ್ದಂತೆ ಸಂಭ್ರಮಿಸಿ, ಮೂವರು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!