Friday, December 8, 2023

Latest Posts

 ಗಾಂಧಿ ಜಯಂತಿ: ಮಹಾತ್ಮರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕಾದ ಕೆಲ ವಿಷಯಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ಟೋಬರ್ 2 ಮಹಾತ್ಮಾ ಗಾಂಧಿಯವರ ಜನ್ಮದಿನ. ಗಾಂಧಿಯವರ 154 ನೇ ಜನ್ಮದಿನದ ಸಂದರ್ಭದಲ್ಲಿ, ಪ್ರತಿಯೊಬ್ಬ ಭಾರತೀಯನೂ ಗಾಂಧೀಜಿಯವರ ಬಗೆಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಧಾರೆಗಳಿವೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜೀವನವು ಜಗತ್ತಿಗೇ ಸ್ಫೂರ್ತಿಯಾಗಿದೆ. ಅಹಿಂಸೆಯ ಮಾರ್ಗದಲ್ಲಿ ನಡೆದರೆ, ಯಶಸ್ಸು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದ ಅವರ ಮಾರ್ಗ..ಹಲವರಿಗೆ ಸ್ವಾತಂತ್ರ್ಯದ ಬಯಕೆಯನ್ನು ಹೊತ್ತಿಸಿತು.

  • 1930 ರಲ್ಲಿ ಟೈಮ್ ನಿಯತಕಾಲಿಕವು ಮಹಾತ್ಮ ಗಾಂಧಿಯವರಿಗೆ ‘ಮ್ಯಾನ್‌ ಆಫ್‌ ದಿ ಇಯರ್’ ಎಂಬ ಬಿರುದನ್ನು ನೀಡಿತು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಾತ್ಮ ಗಾಂಧೀಜಿ ಮಾತ್ರ.
  • ಒಂದು ಸಂದರ್ಭದಲ್ಲಿ ರೈಲಿನಿಂದ ಇಳಿಯುವಾಗ ಗಾಂಧೀಜಿಯವರ ಪಾದರಕ್ಷೆಯೊಂದು ಟ್ರ್ಯಾಕ್ ಮೇಲೆ ಬಿದ್ದಿತ್ತು. ಕೂಡಲೇ ಇನ್ನೊಂದು ಕಾಲಿನಲ್ಲಿದ್ದ ಚಪ್ಪಲಿಯನ್ನೂ ಎಸೆದರಂತೆ. ಯಾರಿಗೆ ಒಂದು ಪಾದರಕ್ಷೆ ಸಿಗುತ್ತದೋ ಅವರು ಎರಡನೆಯದನ್ನು ಸಹ ತೆಗೆದುಕೊಳ್ಳುತ್ತಾರೆ ಎಂದರಂತೆ.
  • ಮಹಾತ್ಮಾ ಗಾಂಧಿಯವರ ಆತ್ಮಚರಿತ್ರೆ “ಮೈ ಎಕ್ಸ್‌ಪರಿಮೆಂಟ್ಸ್ ವಿತ್ ಟ್ರುತ್” 1927 ರಲ್ಲಿ ಪ್ರಕಟವಾಯಿತು. ಇದು 20 ನೇ ಶತಮಾನದ 100 ಪ್ರಮುಖ ಆಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದಾಗಿದೆ.
  • ಗಾಂಧೀಜಿಯವರು ಐರಿಶ್ ಉಚ್ಚಾರಣೆಯೊಂದಿಗೆ ಇಂಗ್ಲಿಷ್ ಮಾತನಾಡುತ್ತಿದ್ದರು. ಅವರ ಮೊದಲ ಇಂಗ್ಲಿಷ್ ಶಿಕ್ಷಕ ಐರಿಶ್‌ನವರಾಗಿದ್ದರಿಂದ ಗಾಂಧಿ ಕೂಡ ಅದೇ ಉಚ್ಚಾರಣೆಯನ್ನು ಪಡೆದರು.
  • ಗಾಂಧಿಯವರಿಗೆ ರವೀಂದ್ರನಾಥ ಠಾಗೋರ್ ಅವರು “ಮಹಾತ್ಮ” ಎಂಬ ಬಿರುದನ್ನು ನೀಡಿದರು. ಒಮ್ಮೆ ಗಾಂಧಿಯವರು ಟ್ಯಾಗೋರ್ ಅವರನ್ನು ಭೇಟಿಯಾದಾಗ, ಅವರು ಅವರನ್ನು ‘ನಮಸ್ತೆ ಗುರುದೇವ್’ ಎಂದು ಸಂಬೋಧಿಸಿದರು. ಬದಲಾಗಿ, ಟ್ಯಾಗೋರ್, “ನಾನು ಗುರುದೇವ ಮತ್ತು ನೀವು ಮಹಾತ್ಮ” ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!