ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಏಕಕಾಲದಲ್ಲಿ ಹಲವು ಹೊಣೆಗಾರಿಕೆ ನಿಭಾಯಿಸಬೇಕಾದ ಅನಿವಾರ್ಯತೆ. ಕೆಲವರ ಅಸಹಕಾರದಿಂದ ಅಸಹನೆ ಹೆಚ್ಚುವುದು. ಸಂಯಮ ಮುಖ್ಯ.
ವೃಷಭ
ಕೆಲವರ ಚುಚ್ಚು ಮಾತು ಮನಸ್ಸು ಕೆಡಿಸಬಹುದು. ನಿಮ್ಮ ಏಕಾಗ್ರತೆ ಹಾಳಾದೀತು. ಹಾಗೆಂದು ಉತ್ಸಾಹ ಕುಂದದಿರಿ. ನಿಮ್ಮ ಕಾರ್ಯ ಮುಂದರಿಸಿ.
ಮಿಥುನ
ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ಅವರ ಬೇಕುಬೇಡ ಅರಿಯಲು ಸಫಲರಾಗುವಿರಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು.
ಕಟಕ
ಕಾರ್ಯದಲ್ಲಿ ಸಫಲತೆ. ವೃತ್ತಿಯಲ್ಲಿ ನಿಮ್ಮ ಗುರಿ ಈಡೇರುವುದು. ಕೌಟುಂಬಿಕ ಸಮಸ್ಯೆ ನಿವಾರಣೆ. ಬಂಧುಗಳ ಸಹಕಾರ. ಒಟ್ಟಿನಲ್ಲಿ ನೆಮ್ಮದಿಯ ದಿನ.
ಸಿಂಹ
ಹೆಗಲೇರಿದ ದೊಡ್ಡ ಕಾರ್ಯ ಸಕಾಲದಲ್ಲಿ ಮುಗಿಸುವಿರಿ. ಖಾಸಗಿ ಬದುಕಿನಲ್ಲಿ ನೀವು ನಿರೀಕ್ಷಿಸಿದ ಬೆಳವಣಿಗೆ ಸಾಧ್ಯವಾಗಲಿದೆ. ಆರ್ಥಿಕ ಉನ್ನತಿ.
ಕನ್ಯಾ
ಮುಖ್ಯವಾದ ಕೆಲಸ ಇಂದು ಸಫಲವಾಗಿ ಮುಗಿಯುವುದು. ಕಠಿಣ ಕಾರ್ಯವೂ ಸುಲಭವೆನಿಸುವುದು. ನಿಮಗೆ ಇಷ್ಟವಾದ ವಸ್ತು ಖರೀದಿ ಸಂಭವ.
ತುಲಾ
ಇಂದು ಆರಾಮವಾಗಿ ಕಳೆಯಬೇಕು ಎಂಬ ನಿಮ್ಮ ಯೋಜನೆ ಫಲಿಸದು. ಆಕಸ್ಮಿಕ ಬೆಳವಣಿಗೆ ನಿಮ್ಮನ್ನು ದಿನವಿಡೀ ಒತ್ತಡದಲ್ಲಿ ಮುಳುಗಿಸುವುದು.
ವೃಶ್ಚಿಕ
ನಿಮ್ಮ ಎಲ್ಲ ಕೆಲಸ ಇಂದು ಸುಗಮವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರಕುವುದು. ಬಂಧುಗಳಿಂದ ಸಹಕಾರ ಲಭಿಸುವುದು.
ಧನು
ಹೊಸ ವ್ಯವಹಾರಕ್ಕೆ ಕೈ ಹಾಕದಿರಿ. ಅದು ನಿಮ್ಮ ಮೇಲೆ ಒತ್ತಡ ಹೇರುವುದಲ್ಲದೆ, ಮನಸ್ಸಿನ ನೆಮ್ಮದಿ ಕಸಿಯಲಿದೆ. ಇಂದು ಖರ್ಚು ಅಧಿಕ.
ಮಕರ
ಮನೆಯಲ್ಲಿ ವಾಗ್ವಾದ ನಡೆದೀತು. ಸಾಧ್ಯವಾದಷ್ಟು ಅದರಿಂದ ದೂರವಿರಲು ಯತ್ನಿಸಿ. ಮಾತಿಗೆ ಮಾತು ಕೂಡಿಸಲು ಹೋಗಬೇಡಿ.
ಕುಂಭ
ಉತ್ಸಾಹ ಪೂರ್ಣ ಕೌಟುಂಬಿಕ ಪರಿಸರ. ಬಂಧುಗಳ ಭೇಟಿ, ಕಾರ್ಯಗಳೆಲ್ಲ ಸಲೀಸು. ಆರೋಗ್ಯ ಸಮಸ್ಯೆ ನಿವಾರಣೆ. ನಿಮಗಿಂದು ಅನುಕೂಲಕರ ದಿನ.
ಮೀನ
ಹೆಚ್ಚು ಹೊಣೆಗಾರಿಕೆ. ಆದರೆ ನಿಮ್ಮ ಉತ್ಸಾಹಕ್ಕೆ ಭಂಗವಿಲ್ಲ. ಕಾರ್ಯ ಸಿದ್ಧಿ. ಕುಟುಂಬಸ್ಥರ ಜತೆ ಸೌಹಾರ್ದತೆ. ಆರ್ಥಿಕ ಪರಿಸ್ಥಿತಿ ಉತ್ತಮ.