Sunday, December 3, 2023

Latest Posts

ಎಮ್ಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ: ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಕಮಿಡಿಯನ್‌ ವೀರ್ ದಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಪ್ರತಿಷ್ಠಿತ ಪ್ರಶಸ್ತಿಗೆ ಜನಪ್ರಿಯ ಕಮಿಡಿಯನ್‌ ವೀರ್‌ ದಾಸ್‌ ಭಾಜನರಾಗಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್​ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಅದಲ್ಲದೆ ಭಾರತೀಯ ಟಿವಿ ಜಗತ್ತಿನಲ್ಲಿನ ಸಾಧನೆಗಾಗಿ ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡೆಲ್ಲಿ ಕ್ರೈಂ ಸರಣಿಯ ನಟಿ ಶಫಾಲಿ ಶಾ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಕೊನೆಯ ಹಂತದಲ್ಲಿ ಪ್ರಶಸ್ತಿ ಕೈತಪ್ಪಿತು. ಜಿಮ್ ಸರ್ಬ್​ ಅವರು ಸಹ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!