May 15, 2026
Friday, May 15, 2026
spot_img

ಇಂಟರ್ನ್ಯಾಷನಲ್ ಫ್ಯಾಮಿಲಿ ಡೇ: ಯುವ ಪೀಳಿಗೆಗೆ ಫ್ಯಾಮಿಲಿ ಬಾಂಡಿಂಗ್ ಟಿಪ್ಸ್ ಇಲ್ಲಿದೆ!

ಪ್ರತಿ ವರ್ಷ ಮೇ 15 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಯಶಸ್ಸಿನ ಹಿಂದೆ ನಿಲ್ಲುವ, ಪ್ರೀತಿ ಮತ್ತು ಭದ್ರತೆ ನೀಡುವ ಕುಟುಂಬದ ಮಹತ್ವವನ್ನು ನೆನಪಿಸಲು ಈ ದಿನ ಅತ್ಯಂತ ಸೂಕ್ತವಾಗಿದೆ. ಇಂದಿನ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಕೆಲಸದ ಒತ್ತಡದಿಂದಾಗಿ ಒಂದೇ ಮನೆಯಲ್ಲಿದ್ದರೂ ಭಾವನಾತ್ಮಕ ಅಂತರ ಹೆಚ್ಚಾಗುತ್ತಿದೆ. ಅದರಲ್ಲೂ ಇಂದಿನ ಯುವ ಜನಾಂಗವು ಫ್ಯಾಮಿಲಿ ಜೊತೆ ಸಮಯ ಕಳೆಯುವುದು ತೀರಾ ಕಡಿಮೆಯಾಗಿದೆ. ಹಾಗಾದರೆ, ಈ ವಿಶೇಷ ದಿನದ ಸಂದರ್ಭದಲ್ಲಿ ಜನರೇಷನ್ ಗ್ಯಾಪ್‌ಗೆ ಬ್ರೇಕ್ ಹಾಕಿ, ಯುವ ಪೀಳಿಗೆಯು ತಮ್ಮ ಫ್ಯಾಮಿಲಿ ಜೊತೆಗಿನ ಕನೆಕ್ಷನ್ ಅನ್ನು ಹೇಗೆ ಗಟ್ಟಿಗೊಳಿಸಿಕೊಳ್ಳಬಹುದು? ಕಳೆದುಹೋಗುತ್ತಿರುವ ಕೌಟುಂಬಿಕ ಬಾಂಧವ್ಯವನ್ನು ಮರಳಿ ಪಡೆಯಲು ಮಾಡಬಹುದಾದ ಕೆಲವು ಪ್ರಾಯೋಗಿಕ ಮಾರ್ಗಗಳನ್ನು ನೋಡೊಣ.

ಯುವ ಪೀಳಿಗೆಯು ತಮ್ಮ ಫ್ಯಾಮಿಲಿ ಜೊತೆಗಿನ ಕನೆಕ್ಷನ್ ಅನ್ನು ಹೇಗೆ ಗಟ್ಟಿಗೊಳಿಸಿಕೊಳ್ಳಬಹುದು?

ರಾತ್ರಿಯ ಊಟವನ್ನು ಇಡೀ ಕುಟುಂಬ ಒಟ್ಟಿಗೆ ಕುಳಿತು ಮಾಡಿ. ಊಟ ಮಾಡುವಾಗ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಗಳನ್ನು ಸಂಪೂರ್ಣವಾಗಿ ದೂರ ಇಟ್ಟು ಆ ಸಮಯವನ್ನು ದಿನದ ಸುಖ-ದುಃಖಗಳನ್ನು ಹಂಚಿಕೊಳ್ಳಲು ಬಳಸಿಕೊಳ್ಳಿ.

ಇಂದಿನ ಹೊಸ ಆ್ಯಪ್‌ಗಳು, ಯುಪಿಐ ಪೇಮೆಂಟ್ಸ್ ಅಥವಾ ಸ್ಮಾರ್ಟ್‌ಫೋನ್ ಫೀಚರ್‌ಗಳನ್ನು ನಿಮ್ಮ ಪೋಷಕರಿಗೆ ಕಲಿಸಿಕೊಡಿ. ಇದು ಯುವಕರ ತಾಂತ್ರಿಕ ಜ್ಞಾನವನ್ನು ಹಿರಿಯರಿಗೆ ತಲುಪಿಸಿ, ಜನರೇಷನ್ ಗ್ಯಾಪ್ ಕಡಿಮೆ ಮಾಡುತ್ತದೆ.

ವಾರಾಂತ್ಯದಲ್ಲಿ ಮೊಬೈಲ್ ಸ್ಕ್ರೀನ್ ಬಿಟ್ಟು, ಎಲ್ಲರೂ ಒಟ್ಟಿಗೆ ಆಡಬಹುದಾದ ಕ್ಯಾರಂ, ಚೆಸ್, ಅಥವಾ ಚೌಕಾಬಾರದಂತಹ ಬೋರ್ಡ್ ಆಟಗಳನ್ನು ಆಡಬೇಕು. ಇದು ಮನೆಯಲ್ಲಿ ನಗುವಿನ ವಾತಾವರಣವನ್ನು ಸೃಷ್ಟಿಸುತ್ತದೆ.

ವಾರದಲ್ಲಿ ಒಂದು ದಿನ ಪೋಷಕರಿಗೆ ಅಡುಗೆಯಲ್ಲಿ ಸಹಾಯ ಮಾಡಿ ಅಥವಾ ಯುವಕರು ತಮಗೆ ಇಷ್ಟವಾದ ಹೊಸ ತಿನಿಸನ್ನು ಮಾಡಿ ಇಡೀ ಫ್ಯಾಮಿಲಿಗೆ ಸರ್ವ್ ಮಾಡಿ. ಜೊತೆಯಾಗಿ ಕೆಲಸ ಮಾಡುವುದರಿಂದ ಪರಸ್ಪರ ಒಡನಾಟ ಹೆಚ್ಚುತ್ತದೆ.

ಬಿಡುವಿನ ವೇಳೆಯಲ್ಲಿ ಮನೆಯಲ್ಲಿರುವ ಹಳೆಯ ಫೋಟೋ ಆಲ್ಬಮ್‌ಗಳು ಅಥವಾ ಹೋಮ್ ವೀಡಿಯೊಗಳನ್ನು ಒಟ್ಟಿಗೆ ಕುಳಿತು ನೋಡಿ. ಕೆಲವೊಮ್ಮೆ ಪೋಷಕರ ಬಾಲ್ಯದ ದಿನಗಳು ಹಾಗೂ ಅವರ ಕಾಲದ ರೋಮಾಂಚಕ ಕಥೆಗಳನ್ನು ಕೇಳಿ ತಿಳಿದುಕೊಳ್ಳಿ.

ಪ್ರತಿದಿನ ಸಂಜೆ ಪೋಷಕರ ಜತೆ ಕೇವಲ 15 ನಿಮಿಷಗಳ ಕಾಲ ವಾಕಿಂಗ್ ಹೋಗಬೇಕು. ವಾರಕ್ಕೊಮ್ಮೆ ದಿನಸಿ ಸಾಮಗ್ರಿ ತರಲು ಅಥವಾ ತರಕಾರಿ ಕೊಳ್ಳಲು ಪೋಷಕರ ಜೊತೆ ನೀವೇ ಮುಂಚೂಣಿಯಲ್ಲಿ ನಿಂತು ಹೋಗಿ ಬರುವುದು ಒಳ್ಳೆಯದು.

ಕೇವಲ ನಿಮ್ಮ ಇಷ್ಟಗಳನ್ನು ಹೇರುವುದನ್ನು ಬಿಟ್ಟು, ಪೋಷಕರ ಮತ್ತು ಹಿರಿಯರ ಆರೋಗ್ಯ, ಅವರ ಆಲೋಚನೆ ಹಾಗೂ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸಿಕೊಳ್ಳಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !