May 28, 2026
Thursday, May 28, 2026
spot_img

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಈ ಬಾರಿ ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿಯಿಂದ ಯೋಗಾಭ್ಯಾಸ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ದೇಶದ ಜನತೆ ಸಜ್ಜಾಗಿದ್ದು, ಈ ಬಾರಿ ಪ್ರಧಾನಿ ಮೋದಿ ಅವರು ಕೋಲ್ಕತ್ತಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆಯುಷ್‌ ಸಚಿವ ಪ್ರತಾಪ್‌ರಾವ್‌ ಜಾಧವ್, ಜೂ.21 ಕೋಲ್ಕತ್ತಾದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಥೀಮ್‌ ಯೊಂದಿಗೆ ಆಚರಿಸಲು ಸಂಕಲ್ಪ ಹೊಂದಿದ್ದೇವೆ. ಈ ಮೂಲಕ ದೈಹಿಕ ಆರೋಗ್ಯ, ಮಾನಸಿಕ ಕ್ಷೇಮ, ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವ ಉದ್ದೇಶ ನಮ್ಮದು ಎಂದು ತಿಳಿಸಿದರು.

ಆಯುಷ್ ಸಚಿವಾಲಯದ ಮೂಲಕ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ ಎಂದರು.

ಪ್ರತಿ ಮನೆ ಮನೆಗೂ ಯೋಗ

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಡಿಯಲ್ಲಿ ಆಯುಷ್ ಸಚಿವಾಲಯವು ಇಂದು ನಿರಂತರ ಸಂಪರ್ಕ ಮತ್ತು ದೇಶದ ಜನತೆಯ ಭಾಗವಹಿಸುವಿಕೆಯ ಮೂಲಕ ಪ್ರತಿಯೊಂದು ಹಳ್ಳಿ, ಮನೆ, ಶಾಲೆ, ಕಚೇರಿ ಮತ್ತು ಸಮುದಾಯಕ್ಕೆ ಯೋಗವನ್ನು ಕೊಂಡೊಯ್ಯಲು ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !