ರಾಜ್ಯದೊಳಗಿನ ಪ್ರಸರಣ ವ್ಯವಸ್ಥೆ : ಗ್ರೀನ್ ಎನರ್ಜಿ ಕಾರಿಡಾರ್ ಹಂತ-II ಕ್ಕೆ ಕೇಂದ್ರ ಸಂಪುಟದ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿ: ಏಳು ರಾಜ್ಯಗಳಲ್ಲಿ 10,750 ಸರ್ಕ್ಯೂಟ್ ಕಿಲೋಮೀಟರ್ (ಸಿಕೆಎಂ) ಪ್ರಸರಣ ಮಾರ್ಗಗಳು ಮತ್ತು ಮತ್ತು ಸುಮಾರು 27,500 ಮೆಗಾ ವೋಲ್ಟ್ ಆಂಪಿಯರ್‌ ಸಾಮರ್ಥ್ಯದ ಉಪಕೇಂದ್ರಗಳ (ಎಂವಿಎ) ಸೇರ್ಪಡೆಗಾಗಿ ರಾಜ್ಯದೊಳಗಿನ ಪ್ರಸರಣ ವ್ಯವಸ್ಥೆ (ಇಂಟ್ರಾ-ಸ್ಟೇಟ್ ಟ್ರಾನ್ಸ್‌ಮಿಷನ್ ಸಿಸ್ಟಮ್) ಗ್ರೀನ್ ಎನರ್ಜಿ ಕಾರಿಡಾರ್ (ಜಿಇಸಿ) ಎರಡನೇ ಹಂತದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದನೆ ನೀಡಿದೆ.

ಈ ಯೋಜನೆಯು ಏಳು ರಾಜ್ಯಗಳಾದ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಸರಿಸುಮಾರು 20 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ (ಆರ್.ಇ.) ವಿದ್ಯುತ್ ಯೋಜನೆಗಳ ಗ್ರಿಡ್ ಏಕೀಕರಣ ಮತ್ತು ವಿದ್ಯುತ್ ಅನ್ನು ಗ್ರಿಡ್ ಗೆ ಸೇರಿಸುವ ಕೆಲಸವನ್ನು ಸುಗಮಗೊಳಿಸುತ್ತದೆ.

ನೆರವಿನಿಂದ ದೇಶದ ನಾಗರಿಕರಿಗೆ ಪ್ರಯೋಜನ:
ಯೋಜನೆಯನ್ನು ಒಟ್ಟು ಅಂದಾಜು ವೆಚ್ಚ ₹ 12,031.33 ಕೋಟಿಗಳಲ್ಲಿ ಮತ್ತು ಯೋಜನಾ ವೆಚ್ಚದ ಶೇ. 33ರಷ್ಟು ಅಂದರೆ ₹ 3970.34 ಕೋಟಿ ಕೇಂದ್ರ ಹಣಕಾಸು ನೆರವಿನೊಂದಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. 2021-22 ರಿಂದ 2025-26 ರವರೆಗಿನ ಐದು ಹಣಕಾಸು ವರ್ಷಗಳ ಅವಧಿಯಲ್ಲಿ ಪ್ರಸರಣ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತದೆ. ಕೇಂದ್ರ ಹಣಕಾಸು ನೆರವು (ಸಿಎಫ್ಎ) ರಾಜ್ಯದೊಳಗಿನ ಪ್ರಸರಣ ಶುಲ್ಕಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಸರಕಾರದ ಬೆಂಬಲವು ಅಂತಿಮವಾಗಿ ಕಡೆಯ ಬಳಕೆದಾರರಾದ ದೇಶದ ನಾಗರಿಕರಿಗೆ ಪ್ರಯೋಜನ ನೀಡುತ್ತದೆ.

ಯೋಜನೆಯಿಂದ ಆಗುವ ಉಪಯೋಗಗಳೇನು?

🔹 ಯೋಜನೆಯು 2030ರ ವೇಳೆಗೆ 450 ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

🔹 ದೇಶದ ದೀರ್ಘಾವಧಿಯ ಇಂಧನ ಭದ್ರತೆಗೆ ಕೊಡುಗೆ ನೀಡುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

🔹 ಇದು ಇಂಧನ ಮತ್ತು ಇತರ ಸಂಬಂಧಿತ ವಲಯಗಳಲ್ಲಿ ಕೌಶಲ ಹೊಂದಿದ ಮತ್ತು ಕೌಶಲರಹಿತ ಸಿಬ್ಬಂದಿಗೆ ದೊಡ್ಡ ಪ್ರಮಾಣದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಈ ಯೋಜನೆಯು ಜಿಇಸಿ-ಹಂತ-1ಕ್ಕೆ ಹೆಚ್ಚುವರಿಯಾಗಿದೆ, ಇದು ಈಗಾಗಲೇ ಆಂಧ್ರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗ್ರಿಡ್ ಏಕೀಕರಣ ಮತ್ತು 24 ಗಿಗಾವ್ಯಾಟ್ ಆರ್.ಇ. ವಿದ್ಯುತ್ ಅನ್ನು ಗ್ರಿಡ್ ಗೆ ಸೇರಿಸಲು ಅನುಷ್ಠಾನದಲ್ಲಿದೆ ಮತ್ತು 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ₹ 10,141.68 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ₹ 4056.67 ಕೋಟಿ ಕೇಂದ್ರ ಹಣಕಾಸು ನೆರವಿನೊಂದಿಗೆ 9700 ಕಿ.ಮೀ. ಪ್ರಸರಣ ಮಾರ್ಗಗಳು ಮತ್ತು 22600 ಎಂವಿಎ ಸಾಮರ್ಥ್ಯದ ಸಬ್‌ಸ್ಟೇಷನ್‌ಗಳ ಸೇರ್ಪಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!