ಬೆಂಗಳೂರು ನಗರಕ್ಕೆ ಮಹತ್ವಾಕಾಂಕ್ಷೆಯ ಯೋಜನೆ ಪ್ರಕಟಿಸಿದ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನಗರದ ಅತ್ಯಂತ ವಾಹನ ದಟ್ಟನೆಯ ಜಂಕ್ಷನ್ ಆಗಿರುವ ಹೆಬ್ಬಾಳದಲ್ಲಿ ನಗರದಿಂದ
ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ತಲಾ 5 ಪಥಗಳ ಒಟ್ಟು 10 ಪಥಗಳುಳ್ಳ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು
ಮಾಧ್ಯಮಗಳಿಗೆ ವಿವರಗಳನ್ನು ನೀಡಿದ್ದಾರೆ.

ಬಿಡಿಎ, ಬಿಎಂಟಿಸಿ, ಬೆಸ್ಕಾಂ, ಬಿಬಿಎಂಪಿ, ಬಿಎಂಆರ್‌ಸಿಎಲ್‌ನೊಂದಿಗೆ ಪರಸ್ಪರ ಸಂವಾದ ಹಾಗೂ ಐದು ವಿಭಿನ್ನ ಆಯ್ಕೆಗಳನ್ನು ಪರಿಶೀಲಿಸಿ, 2051ರಲ್ಲಿನ ಸಂಚಾರ ಅಗತ್ಯ ಪೂರೈಸಲು ಸಾಮರ್ಥ್ಯ ಹೆಚ್ಚಿಸಲು ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಗೆ ನಿಧಿಯನ್ನು ಮೀಸಲಿಡುವ ನಿರೀಕ್ಷೆಯಿದೆ. ಯೋಜನೆಯ ಅಂದಾಜುಪಟ್ಟಿ ಹಾಗೂ ಸಮಗ್ರ ಯೋಜನಾ ವರದಿ (ಡಿಪಿಆರ್) ಇನ್ನಷ್ಟೇ ತಯಾರಾಗಬೇಕಿದೆ. ಸರಕಾರದ ಮಹತ್ವಕಾಂಕ್ಷೆಯ ಈ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಐದು ಇಲಾಖೆಗಳ ಸಹಭಾಗಿತ್ವದಲ್ಲಿ ಸರಕಾರ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿ, ಡಿಪಿಆರ್ ತಯಾರಿಸಲಿದೆ ಎಂದು ಸಚಿವ ಮಾಧುಸ್ವಾಮಿ
ವಿವರಿಸಿದ್ದಾರೆ.

ಪ್ರಸ್ತಾವಿಸಲ್ಪಟ್ಟ ಹೊಸ ರಸ್ತೆ ಹೇಗಿರುತ್ತದೆ?

* ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಸ್ತಿತ್ವದಲ್ಲಿರುವ ಮೇಲ್ಸೇತುವೆ
ಪಶ್ಚಿಮಕ್ಕೆ ಹೊಸ ಚತುಷ್ಪಥ ಮೇಲ್ಸೇತುವೆ. ಈ ಮೇಲ್ಸೇತುವೆ ಮೂರು ಪಥಗಳು ವಿಮಾನ
ನಿಲ್ದಾಣ ಕಡೆಗೆ ಮುಂದುವರಿದರೆ, ಎರಡು ಪಥಗಳು ತುಮಕೂರು ಕಡೆಗೆ ಇಳಿಯಲಿವೆ.

* ತುಮಕೂರಿನಿಂದ ಕೆ.ಆರ್.ಪುರ ಕಡೆಗೆ ಹೊಸ ಮೂರು ಪಥಗಳ ಕೆಳ ಸೇತುವೆ ನಿರ್ಮಾಣ.

* ಕೆ.ಆರ್.ಪುರದಿಂದ ನಗರಕ್ಕೆ ಹಾಗೂ ಕೆ.ಆರ್.ಪುರದಿಂದ ವಿಮಾನ ನಿಲ್ದಾಣಕ್ಕೆ
ಪ್ರತ್ಯೇಕ ಹೊಸ ದ್ವಿಪಥ ಮೇಲ್ಸೇತುವೆಗಳು.

* ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸೇತುವೆಯಿಂದ ಪೂರ್ವಕ್ಕೆ ವಿಮಾನ ನಿಲ್ದಾಣದಿಂದ
ನಗರಕ್ಕೆ ಹೊಸ ಮೂರು ಪಥದ ಮೇಲ್ಸೇತುವೆ ಪ್ರಸ್ತಾಪಿಸಲಾಗಿದೆ.

* ಕೆ.ಆರ್.ಪುರದಿಂದ ನಗರಕ್ಕೆ ಎರಡು ಮೇಲ್ಸೇತುವೆಯನ್ನು ಹೊಸ ಮೇಲ್ಸೇತುವೆಯಲ್ಲಿ
ವಿಲೀನಗೊಳಿಸಿ, ಚತುಷ್ಪಥವಾಗಿ ಇಳಿಯಲಿವೆ.

* ವಿಮಾನ ನಿಲ್ದಾಣದಿಂದ ಕೆ.ಆರ್.ಪುರಕ್ಕೆ ಅಸ್ತಿತ್ವದಲ್ಲಿರುವ ಸರ್ವಿಸ್ ರಸ್ತೆಯನ್ನು
ದ್ವಿಪಥದಿಂದ ತ್ರಿಪಥಕ್ಕೆ ವಿಸ್ತರಿಸಲಾಗುತ್ತದೆ.

* ವಿಮಾನ ನಿಲ್ದಾಣದಿಂದ ತುಮಕೂರು ಕಡೆಗಿರುವ ದ್ವಿಪಥ ರಸ್ತೆಗೆ ಸಮಾನಾಂತರವಾಗಿ ಹೊಸ
ಚತುಷ್ಪಥ ನೆಲಮಟ್ಟದ ರಸ್ತೆ.

* ಕೆ.ಆರ್.ಪುರದಿಂದ ತುಮಕೂರಿಗೆ ಈಗಿರುವ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ
ವಿಸ್ತರಿಸಲಾಗುತ್ತದೆ.

* ತುಮಕೂರಿನಿಂದ ಕೆ.ಆರ್.ಪುರ ಕಡೆಗೆ ಇರುವ ಹೊಸ ದ್ವಿಪಥದ ಯೂಟರ್ನ್ ಅಂಡರ್‌ಪಾಸ್
ನಿರ್ಮಿಸಲಾಗುತ್ತದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!