ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಕ್ರಿಕೆಟ್ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿಉವ ಭಾರತೀಯ ಕ್ರಿಕೆಟ್ ರಂಗದ ಬ್ಯಾಟರ್ ಶ್ರೀಶಾಂತ್ ಈಗ ಬೆಳ್ಳಿತೆರೆ ಮೇಲೆ ಬಣ್ಣ ಹಚ್ಚಿದ್ದಾರೆ.
ಹೌದು. ನಿರ್ದೇಶಕ ವಿಘ್ನೇಶ್ ಶಿವನ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಕಾದು ವಾಕುಲ ರೆಂಡು ಕಾದಲ್ ಚಿತ್ರದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಚಿತ್ರದಲ್ಲಿ ಶ್ರೀಶಾಂತ್ ಮೊಹಮ್ಮದ್ ಮೊಬಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದ್ದು, ಸಿನಿಮಾ ಜರ್ನಿಗೆ ಶುಭಕೋರಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ನಿಜವಾದ ಚಾಂಪಿಯನ್ ಆಗಿದ್ದ ಶ್ರೀಶಾಂತ್ ಈಗ ಬೆಳ್ಳಿಪರದೆಯಲ್ಲೂ ಮಿಂಚಲಿದ್ದಾರೆ. ಶ್ರೋಶಾಂತ್ ಅವರನ್ನು ಮೊಹಮ್ಮದ್ ಮೊಬಿ ಆಗಿ ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ.
ಈ ಚಿತ್ರದಲ್ಲಿ ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಅವರು ಕೂಡ ನಟಿಸಲಿದ್ದಾರೆ.